1 ಯೋಹಾನ 3
  • 1 ಇಗೋ, ನಾವು ದೇವರ ಪುತ್ರರೆಂದು ಕರೆಯಲ್ಪಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ; ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳು ವದಿಲ್ಲ; ಯಾಕಂದರೆ ಅದು ಆತನನ್ನು ತಿಳಿದು ಕೊಳ್ಳಲಿಲ್ಲ.
  • 2 ಪ್ರಿಯರೇ, ನಾವು ಈಗ ದೇವರ ಪುತ್ರರಾಗಿದ್ದೇವೆ, ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತ್ಯಕ್ಷವಾಗಲಿಲ್ಲ. ಆತನು ಪ್ರತ್ಯಕ್ಷ ನಾದಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು; ಯಾಕಂದರೆ ನಾವು ಆತನನ್ನು ಆತನಿರುವ ಪ್ರಕಾರವೇ ನೋಡುವೆವು.
  • 3 ಆತನಲ್ಲಿ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಆತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.
  • 4 ಪಾಪಮಾಡುವವನು ನ್ಯಾಯಪ್ರಮಾಣವನ್ನು ವಿಾರುವವನಾಗಿದ್ದಾನೆ; ಯಾಕಂದರೆ ನ್ಯಾಯ ಪ್ರಮಾಣವನ್ನು ವಿಾರುವದೇ ಪಾಪ.
  • 5 ಪಾಪಗಳನ್ನು ನಿವಾರಣೆ ಮಾಡುವದಕ್ಕಾಗಿ ಆತನು ಪ್ರತ್ಯಕ್ಷನಾದ ನೆಂಬದು ನಿಮಗೆ ಗೊತ್ತಾಗಿದೆ; ಆತನಲ್ಲಿ ಪಾಪವಿಲ್ಲ.
  • 6 ಆತನಲ್ಲಿ ನೆಲೆಗೊಂಡಿರುವವನು ಪಾಪಮಾಡನು; ಪಾಪಮಾಡುವವನು ಆತನನ್ನು ಕಂಡವನೂ ಅಲ್ಲ, ತಿಳಿದವನೂ ಅಲ್ಲ.
  • 7 ಚಿಕ್ಕ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಆತನು ಹೇಗೆ ನೀತಿವಂತ ನಾಗಿದ್ದಾನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.
  • 8 ಪಾಪಮಾಡುವವನು ಸೈತಾನ ನಿಗೆ ಸಂಬಂಧಪಟ್ಟವನಾಗಿದ್ದಾನೆ; ಯಾಕಂದರೆ ಆದಿ ಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದದರಿಂದ ದೇವಕುಮಾರನು ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ಪ್ರತ್ಯಕ್ಷನಾದನು.
  • 9 ದೇವರಿಂದ ಹುಟ್ಟಿದವನು ಪಾಪಮಾಡನು; ಯಾಕಂದರೆ ಆತನ ಬೀಜವು ಅವನಲ್ಲಿ ನೆಲೆಗೊಂಡದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡ ಲಾರನು.
  • 10 ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರಿಗೆ ಸಂಬಂಧಪಟ್ಟವನಲ್ಲ.
  • 11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾರ್ತೆಯಾಗಿದೆ.
  • 12 ಕೆಡುಕ ನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನ ನಂತೆ ಅಲ್ಲ. ಯಾವ ಕಾರಣದಿಂದ ಅವನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದದರಿಂದಲೇ.
  • 13 ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.
  • 14 ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.
  • 15 ಯಾರಾದರೂ ತನ್ನ ಸಹೋದರನನ್ನು ದ್ವೇಷಿಸುವ ವನು ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರ ನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.
  • 16 ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.
  • 17 ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ?
  • 18 ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು.
  • 19 ಸತ್ಯಕ್ಕೆ ಸಂಬಂಧಪಟ್ಟವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ; ಆತನ ಸಮಕ್ಷಮದಲ್ಲಿ ನಮ್ಮ ಹೃದಯಗಳನ್ನು ನಿಶ್ಚಯಪಡಿಸಿಕೊಳ್ಳುತ್ತೇವೆ.
  • 20 ನಮ್ಮ ಹೃದಯವು ನಮ್ಮನ್ನು ಖಂಡಿಸದಿದ್ದರೆ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವ ನಾಗಿದ್ದಾನೆ.
  • 21 ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ಖಂಡಿಸದಿದ್ದರೆ ನಮಗೆ ದೇವರ ವಿಷಯದಲ್ಲಿ ಭರವಸ ವುಂಟು.
  • 22 ನಾವು ಏನೇನು ಬೇಡಿಕೊಳ್ಳುತ್ತೇವೋ ಆತನಿಂದ ನಾವು ಹೊಂದಿಕೊಳ್ಳುತ್ತೇವೆ. ಯಾಕಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ದೃಷ್ಟಿಯಲ್ಲಿ ಮೆಚ್ಚಿಕೆಯಾದವುಗಳನ್ನು ಮಾಡುವವರಾಗಿದ್ದೇವೆ.
  • 23 ಆತನ ಆಜ್ಞೆ ಯಾವದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನ ಹೆಸರನ್ನು ನಂಬಿ ಆತನು ನಮಗೆ ಆಜ್ಞೆಕೊಟ್ಟ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ.
  • 24 ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ವಾಸಮಾಡುತ್ತಾನೆ. ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿದ ಆತ್ಮನಿಂದಲೇ ನಾವು ಬಲ್ಲೆವು.