ಯೆಶಾಯ 33
  • 1 ನಿನಗೆ ಅಯ್ಯೊ ಸೂರೆಯಾಗದಿದ್ದರೂ ನೀನು ಸೂರೆಮಾಡಿದಿ, ನಿನಗೆ ದ್ರೋಹ ಮಾಡದಿದ್ದರೂ ನೀನು ದ್ರೋಹ ಮಾಡಿದಿ, ನೀನು ಸೂರೆ ಮಾಡುವದನ್ನು ಮುಗಿಸಿದಾಗ ನೀನು ಸೂರೆ ಯಾಗುವಿ, ದ್ರೋಹ ಮಾಡುವುದನ್ನು ಬಿಟ್ಟ ಮೇಲೆ ನಿನಗೂ ದ್ರೋಹ ಮಾಡುವರು.
  • 2 ಓ ಕರ್ತನೇ, ನಮ್ಮ ಕಡೆಗೆ ಕೃಪೆತೋರಿಸು, ನಿನಗೋಸ್ಕರ ನಾವು ಕಾದಿದ್ದೇವೆ. ಪ್ರತಿ ಮುಂಜಾನೆ ನಮಗೆ ಭುಜಬಲವಾಗಿ ಇಕ್ಕಟ್ಟಿನ ಕಾಲದಲ್ಲಿ ನಮ್ಮ ರಕ್ಷಣೆಯಾಗಿಯೂ ಇರು.
  • 3 ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀನು ಏಳುವಾಗ ರಾಜ್ಯಗಳು ಚದರಿಹೋಗುತ್ತವೆ.
  • 4 ನಿಮ್ಮ ಕೊಳ್ಳೆಯು ಕಂಬಳಿ ಹುಳವನ್ನು ಕೂಡಿಸುವ ಹಾಗೆ ಕೂಡಿಸಲ್ಪಡುವದು. ಮಿಡತೆಗಳು ಓಡಾಡುವ ಹಾಗೆ ಅದರ ಮೇಲೆ ಓಡಾಡುವರು.
  • 5 ಕರ್ತನು ಉನ್ನತೋನ್ನತನಾಗಿದ್ದಾನೆ. ಆತನು ಮೇಲಿನ ಲೋಕ ದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿನ್ಯಾಯಗ ಳಿಂದ ತುಂಬಿಸಿದ್ದಾನೆ.
  • 6 ನಿನ್ನ ಕಾಲದಲ್ಲಿ ಸ್ಥಿರತೆಯಾ ಗಿಯೂ ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾ ಗಿಯೂ ಇರುವನು; ಕರ್ತನ ಭಯವೇ ಅವನ ಬೊಕ್ಕಸವಾಗಿರುವದು.
  • 7 ಇಗೋ, ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; ಸಮಾಧಾನದ ರಾಯಭಾರಿಗಳು ಘೋರ ವಾಗಿ ಅಳುತ್ತಿದ್ದಾರೆ.
  • 8 ರಾಜಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ನಿಂತುಹೋದರು. ಅವನು ಒಪ್ಪಂದವನ್ನು ವಿಾರಿದ್ದಾನೆ. ಪಟ್ಟಣಗಳನ್ನು ತಿರಸ್ಕಾರಮಾಡಿ ಯಾವ ಮನುಷ್ಯನನ್ನು ಗಣನೆಗೆತಾ ರನು.
  • 9 ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನ್‌ ನಾಚಿಕೆಪಟ್ಟು ಕಡಿದು ಬೀಳುವದು. ಶಾರೋನ್‌ ಬೆಂಗಾ ಡಾಗಿದೆ. ಬಾಷಾನ್‌ ಮತ್ತು ಕರ್ಮೆಲ್‌ ಹಣ್ಣುಗಳನ್ನು ಉದುರಿಸಿಬಿಟ್ಟಿವೆ.
  • 10 ಕರ್ತನು ಹೀಗನ್ನುತ್ತಾನೆ--ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿ ಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು.
  • 11 ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರು ವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗು ವದು.
  • 12 ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳು ಕೊಂಪೆಗೆ ಬೆಂಕಿಹಚ್ಚಿದಂತಾಗು ವದು.
  • 13 ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸವಿಾಪದಲ್ಲಿರುವವರೇ, ನನ್ನ ಪರಾಕ್ರಮ ವನ್ನು ತಿಳಿದುಕೊಳ್ಳಿರಿ.
  • 14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯವು ಕಪಟಿಗಳನ್ನು ಆಶ್ಚರ್ಯಕ್ಕೊಳಗಾಗಿ--ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುವರು.
  • 15 ನೀತಿಯಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈ ಒದರಿ ರಕ್ತಕ್ಕೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತ ಸ್ಥಳದಲ್ಲಿ ವಾಸಿಸುವನು.
  • 16 ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿ ರುವವು. ರೊಟ್ಟಿಯು ಅವನಿಗೆ ಕೊಡಲ್ಪಡುವದು, ನೀರು ತಪ್ಪುವದಿಲ್ಲ.
  • 17 ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವವು. ಅತಿವಿಸ್ತಾರವಾದ (ದೂರವಾಗಿರುವ) ದೇಶವನ್ನು ಕಣ್ಣು ತುಂಬಾ ನೋಡುವಿರಿ;
  • 18 ಆಗ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ ಬರೆಯು ವವನು ಎಲ್ಲಿ? ಅಂಗೀಕರಿಸುವವನು ಎಲ್ಲಿ? ಬುರುಜು ಗಳನ್ನು (ಗೋಪುರಗಳನ್ನು) ಲೆಕ್ಕಮಾಡಿದವನು ಎಲ್ಲಿ ಎಂದು ಅಂದುಕೊಳ್ಳುವಿರಿ.
  • 19 ನೀನು ಕೇಳಕೂಡದ ಹಾಗೆ ಕಠಿಣವಾದ ಭಾಷೆಯೂ ತಿಳಿಯಕೂಡದ ಹಾಗೆ ಅಪರೂಪವಾದ ಮಾತೂ ಆಡಿದ ಜನರನ್ನು ನೀನು ನೋಡದೆ ಇರುವಿ.
  • 20 ನಮ್ಮ ಹಬ್ಬಗಳು ನಡೆಯುವ ಚೀಯೋನ್‌ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್‌ ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗ ಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ.
  • 21 ಆದರೆ ಅಲ್ಲಿ ವಿಸ್ತಾರವಾದ ನದಿಗಳಂತೆ ಮತ್ತು ಪ್ರವಾಹಗ ಳಂತೆ ಮಹಿಮೆಯುಳ್ಳ ಕರ್ತನು ನಮಗೆ ಇರುವನು. ಅಲ್ಲಿ ಹುಟ್ಟುಗೋಲಿನ ದೋಣಿ ಹೋಗದು, ಘನ ನಾವೆಯು ಸಂಚರಿಸದು.
  • 22 ಕರ್ತನು ನಮ್ಮ ನ್ಯಾಯಾ ಧಿಪತಿಯಾಗಿದ್ದಾನೆ, ಕರ್ತನು ನಮಗೆ ಆಜ್ಞೆ ಕೊಡು ವಾತನು, ಕರ್ತನೇ ನಮ್ಮ ರಾಜನು; ಆತನೇ ನಮ್ಮನ್ನು ರಕ್ಷಿಸುವನು.
  • 23 ನಿನ್ನ ಹಗ್ಗಗಳು ಸಡಲಿ ಸ್ತಂಭದ ಪಾದ ವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು; ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವದಕ್ಕೆ ಆಸ್ಪದವಾ ಯಿತು. ಕುಂಟರೂ ಸುಲಿಗೆ ಮಾಡಿದರು.
  • 24 ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು. ಅದರಲ್ಲಿ ವಾಸವಾಗಿರುವ ಜನರ ಅಕ್ರಮವು ಕ್ಷಮಿಸಲ್ಪಡುವದು.