ನೆಹೆಮೀಯ 7
  • 1 ನಾನು ಗೋಡೆಯನ್ನು ಕಟ್ಟಿಸಿ ಬಾಗಲುಗಳನ್ನು ನಿಲ್ಲಿಸಿದ ತರುವಾಯ ಬಾಗಲು ಕಾಯುವವರೂ ಹಾಡುಗಾರರೂ ಲೇವಿಯರೂ ನೇಮಿಸಲ್ಪಟ್ಟರು.
  • 2 ಆಗ ನಾನು ನನ್ನ ಸಹೋದರನಾದ ಹನಾನಿಗೂ ಅರಮನೆಯ ಅಧಿಪತಿಯಾದ ಹನನ್ಯ ನಿಗೂ ಯೆರೂಸಲೇಮಿನ ಕಾವಲನ್ನು ಒಪ್ಪಿಸಿದೆನು. ಇವನು ಸತ್ಯವುಳ್ಳವನಾಗಿಯೂ ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.
  • 3 ಆಗ ನಾನು ಅವರಿಗೆ--ಬಿಸಿಲು ಏರುವ ಪರ್ಯಂತರಕ್ಕೂ ಯೆರೂಸಲೇಮಿನ ಬಾಗಲುಗಳನ್ನು ತೆರೆಯಬಾರದು; ಇದಲ್ಲದೆ ನೀವು ಸವಿಾಪದಲ್ಲಿ ನಿಂತಿರುವಾಗ, ಕದಗ ಳನ್ನು ಮುಚ್ಚಿ ಅಗುಳಿಗಳನ್ನು ಹಾಕಿರಿ; ಯೆರೂಸಲೇಮಿನ ನಿವಾಸಿಗಳಿಂದ ಪ್ರತಿ ಮನುಷ್ಯನು ತನ್ನ ಕಾವಲಿನ ಲ್ಲಿಯೂ ಪ್ರತಿ ಮನುಷ್ಯನು ತನ್ನ ಮನೆಗೆ ಎದುರಾ ಗಿಯೂ ಕಾವಲಾಗಿರಲು ನೇಮಿಸಿರೆಂದು ಹೇಳಿದೆನು.
  • 4 ಆಗ ಪಟ್ಟಣವು ವಿಸ್ತಾರವಾಗಿಯೂ ದೊಡ್ಡದಾ ಗಿಯೂ ಇತ್ತು. ಆದರೆ ಅದರಲ್ಲಿರುವ ಜನರು ಕೊಂಚ ವಾಗಿದ್ದರು; ಮನೆಗಳು ಕಟ್ಟಲ್ಪಡಲಿಲ್ಲ.
  • 5 ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸಲ್ಪಡುವ ಹಾಗೆ ಪ್ರಮುಖರನ್ನೂ ಅಧಿಕಾರಸ್ಥರನ್ನೂ ಜನರನ್ನೂ ಕೂಡಿಸಿ ಕೊಳ್ಳಲು ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿ ಸಿದನು. ಆಗ ನಾನು ಮೊದಲಿನಲ್ಲಿ ಬಂದವರ ವಂಶಾ ವಳಿಯ ಪತ್ರಿಕೆಯನ್ನು ಕಂಡೆನು.
  • 6 ಅದರಲ್ಲಿ ಬರೆದ ದ್ದೇನಂದರೆ--ಬಾಬೆಲಿನ ಅರಸನಾದ ನೆಬೂಕದ್ನೆಚರನು ಸೆರೆಯಾಗಿ ತಕ್ಕೊಂಡು ಹೋದವರು ಸೆರೆಯಾಗಿ ಒಯ್ಯಲ್ಪಟ್ಟು ಸೆರೆಯಿಂದ ಹೊರಟು ಯೆರೂಸಲೇ ಮಿಗೂ ಯೆಹೂದಕ್ಕೂ
  • 7 ತಮ್ಮ ತಮ್ಮ ಪಟ್ಟಣಕ್ಕೂ ಜೆರುಬ್ಬಾಬೆಲಿನ ಸಂಗಡ ಬಂದ ದೇಶದ ಮಕ್ಕಳು ಯಾರಂದರೆ ಯೇಷೂವನು, ನೆಹೆವಿಾಯನು, ಅಜ ರ್ಯನು, ರಗಮ್ಯನು, ನಹಮಾನೀಯನು, ಮೊರ್ದೆಕೈ ಯನು, ಬಿಲ್ಷಾನನು, ಮಿಸ್ಪೆರೆತನು, ಬಿಗ್ವೈಯು, ನೆಹೂಮನು, ಬಾಣನು, ಇಸ್ರಾಯೇಲ್‌ ಜನರ ಲೆಕ್ಕವು:
  • 8 ಪರೋಷನ ಮಕ್ಕಳು ಎರಡು ಸಾವಿರದ ನೂರ ಎಪ್ಪತ್ತೆರಡು ಮಂದಿಯು.
  • 9 ಶೆಫಟ್ಯನ ಮಕ್ಕಳು ಮುನ್ನೂರ ಎಪ್ಪತ್ತೆರಡು ಮಂದಿಯು.
  • 10 ಆರಹನ ಮಕ್ಕಳು ಆರು ನೂರ ಐವತ್ತೆರಡು ಮಂದಿಯು.
  • 11 ಯೇಷೂವನು ಯೋವಾಬನು ಎಂಬವರ ಮಕ್ಕಳಲ್ಲಿ ಪಹತ್‌ ಮೋವಾಬನ ಮಕ್ಕಳು ಎರಡು ಸಾವಿರ ಎಂಟುನೂರ ಹದಿನೆಂಟು ಮಂದಿಯು.
  • 12 ಏಲಾಮನ ಮಕ್ಕಳು ಸಾವಿರದ ಇನ್ನೂರ ಐವತ್ತು ನಾಲ್ಕುಮಂದಿಯು.
  • 13 ಜತ್ತೂವಿನ ಮಕ್ಕಳು ಎಂಟು ನೂರನಾಲ್ಪತ್ತೈದು ಮಂದಿಯು.
  • 14 ಜಕ್ಕೈಯ ಮಕ್ಕಳು ಏಳು ನೂರ ಅರವತ್ತು ಮಂದಿಯು.
  • 15 ಬಿನ್ನೂಯ ಮಕ್ಕಳು ಆರು ನೂರ ನಾಲ್ವತ್ತೆಂಟು ಮಂದಿಯು.
  • 16 ಬೇಬೈಯ ಮಕ್ಕಳು ಆರು ನೂರ ಇಪ್ಪತ್ತೆಂಟು ಮಂದಿಯು.
  • 17 ಅಜ್ಗಾದನ ಮಕ್ಕಳು ಎರಡು ಸಾವಿರದ ಮುನ್ನೂರ ಇಪ್ಪತ್ತೆರಡು ಮಂದಿಯು.
  • 18 ಅದೋನೀಕಾಮನ ಮಕ್ಕಳು ಆರು ನೂರ ಅರವತ್ತೇಳು ಮಂದಿಯು.
  • 19 ಬಿಗ್ವೈಯ ಮಕ್ಕಳು ಎರಡು ಸಾವಿರದ ಅರವತ್ತೇಳು ಮಂದಿಯು.
  • 20 ಆದೀ ನನ ಮಕ್ಕಳು ಆರುನೂರ ಐವತ್ತೈದು ಮಂದಿಯು.
  • 21 ಹಿಜ್ಕೀಯನ ಮಗನಾದ ಅಟೇರನ ಮಕ್ಕಳು ತೊಂಭತ್ತೆಂಟು ಮಂದಿಯು.
  • 22 ಹಾಷುಮನ ಮಕ್ಕಳು ಮುನ್ನೂರ ಇಪ್ಪತ್ತೆಂಟು ಮಂದಿಯು.
  • 23 ಬೇಚೈಯ ಮಕ್ಕಳು ಮುನ್ನೂರ ಇಪ್ಪತ್ತನಾಲ್ಕು ಮಂದಿಯು.
  • 24 ಹಾರಿಫನ ಮಕ್ಕಳು ನೂರ ಹನ್ನೆರಡು ಮಂದಿಯು.
  • 25 ಗಿಬ್ಯೋನನ ಮಕ್ಕಳು ತೊಂಭತ್ತೈದು ಮಂದಿಯು.
  • 26 ಬೇತ್ಲೆಹೇಮಿನವರೂ ನೆಟೋಫದವರೂ ನೂರ ಎಂಭತ್ತೆಂಟು ಮಂದಿಯು.
  • 27 ಅನಾತೋತಿನ ಮನು ಷ್ಯರು ನೂರ ಇಪ್ಪತ್ತೆಂಟು ಮಂದಿಯು.
  • 28 ಬೇತಜ್ಮಾವೆ ತಿನವರು ನಾಲ್ವತ್ತೆರಡು ಮಂದಿಯು.
  • 29 ಕಿರ್ಯಾ ತ್ಯಾರೀಮ್‌ ಕೆಫೀರವು ಬೇರೋತು ಎಂಬ ಪಟ್ಟಣಗಳ ಮನುಷ್ಯರು ಏಳು ನೂರ ನಾಲ್ವತ್ತ ಮೂರುಮಂದಿಯು.
  • 30 ರಾಮವು ಗೆಬವು ಎಂಬ ಪಟ್ಟಣಗಳ ಮನುಷ್ಯರು ಆರು ನೂರ ಇಪ್ಪತ್ತೊಂದು ಮಂದಿಯು.
  • 31 ಮಿಕ್ಮಾಸಿ ನವರು ನೂರ ಇಪ್ಪತ್ತೆರಡು ಮಂದಿಯು.
  • 32 ಬೇತೇಲ್‌ ಆಯಿಯು ಎಂಬ ಪಟ್ಟಣಗಳ ಮನುಷ್ಯರು ನೂರ ಇಪ್ಪತ್ತ ಮೂರು ಮಂದಿಯು.
  • 33 ಮತ್ತೊಂದು ನೆಬೋ ವಿನವರು ಐವತ್ತೆರಡು ಮಂದಿಯು.
  • 34 ಮತ್ತೊಬ್ಬ ಏಲಾಮನ ಮಕ್ಕಳು ಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
  • 35 ಹಾರೀಮನ ಮಕ್ಕಳು ಮುನ್ನೂರ ಇಪ್ಪತ್ತು ಮಂದಿಯು.
  • 36 ಯೆರಿಕೋವಿನ ಮಕ್ಕಳು ಮುನ್ನೂರ ನಾಲ್ವತ್ತೈದು ಮಂದಿಯು.
  • 37 ಲೋದು ಹಾದೀದು ಓನೋನು ಎಂಬವರ ಮಕ್ಕಳು ಏಳುನೂರ ಇಪ್ಪತ್ತೊಂದು ಮಂದಿಯು.
  • 38 ಸೇನಾಹಯನ ಮಕ್ಕಳು ಮೂರು ಸಾವಿರದ ಒಂಭೈನೂರು ಮೂವತ್ತು ಮಂದಿಯು.
  • 39 ಯಾಜಕರು ಯಾರಂದರೆ; ಯೇಷೂವನ ಮನೆಯವನಾದ ಯೆದಾಯನ ಮಕ್ಕಳು ಒಂಭೈನೂರ ಎಪ್ಪತ್ತು ಮೂರು ಮಂದಿಯು.
  • 40 ಇಮ್ಮೇ ರನ ಮಕ್ಕಳು ಸಾವಿರದ ಐವತ್ತೆರಡು ಮಂದಿಯು.
  • 41 ಪಷ್ಹೂರನ ಮಕ್ಕಳು ಸಾವಿರದ ಇನ್ನೂರ ನಾಲ್ವತ್ತೇಳು ಮಂದಿಯು.
  • 42 ಹಾರಿಮನ ಮಕ್ಕಳು ಸಾವಿರದ ಹದಿ ನೇಳು ಮಂದಿಯು.
  • 43 ಲೇವಿಯರು: ಕದ್ಮೀಯೇಲನ ಮನೆಯವನಾದ ಯೇಷೂವನ ಮಕ್ಕಳು ಹೋದವ್ಯನ ಮಕ್ಕಳೂ ಎಪ್ಪತ್ತು ನಾಲ್ಕು ಮಂದಿಯು.
  • 44 ಹಾಡು ಗಾರರು; ಆಸಾಫನ ಮಕ್ಕಳು ನೂರ ನಾಲ್ವತ್ತೆಂಟು ಮಂದಿಯು.
  • 45 ದ್ವಾರಪಾಲಕರಾದ ಶಲ್ಲೂಮನ ಮಕ್ಕಳು ಅಟೇರನ ಮಕ್ಕಳು ಟಲ್ಮೋನನ ಮಕ್ಕಳು ಅಕ್ಕೂಬನ ಮಕ್ಕಳು ಹಟೀಟನ ಮಕ್ಕಳು ಶೋಬೈಯ ಮಕ್ಕಳೂ ನೂರ ಮೂವತ್ತೆಂಟು ಮಂದಿಯು.
  • 46 ನೆತಿನಿಯರು: ಜೀಹನ ಮಕ್ಕಳು, ಹಸೂಫನ ಮಕ್ಕಳು, ಟಬ್ಬಾವೋತನ ಮಕ್ಕಳು,
  • 47 ಕೇರೋಸನ ಮಕ್ಕಳು, ಸೀಯನ ಮಕ್ಕಳು, ಪಾದೋನನಮಕ್ಕಳು,
  • 48 ಲೆಬಾನನ ಮಕ್ಕಳು, ಹಗಾಬನ ಮಕ್ಕಳು, ಸಲ್ಮೈಯ ಮಕ್ಕಳು,
  • 49 ಹಾನಾನನ ಮಕ್ಕಳು, ಗಿದ್ದೇಲನ ಮಕ್ಕಳು ಗಹರನ ಮಕ್ಕಳು
  • 50 ರೆವಾಯನ ಮಕ್ಕಳು, ರೆಚೀನನ ಮಕ್ಕಳು, ನೆಕೋದನ ಮಕ್ಕಳು,
  • 51 ಗಜ್ಜಾಮನ ಮಕ್ಕಳು, ಉಜ್ಜನ ಮಕ್ಕಳು, ಪಾಸೇಹನ ಮಕ್ಕಳು,
  • 52 ಬೇಸೈನ ಮಕ್ಕಳು, ಮೆಯನೀಮ್‌ರ ಮಕ್ಕಳು, ನೆಫೀಷೆಸೀಮನ ಮಕ್ಕಳು,
  • 53 ಬಕ್ಬೂಕನ ಮಕ್ಕಳು, ಹಕೂಫನ ಮಕ್ಕಳು, ಹರ್ಹೂರನ ಮಕ್ಕಳು,
  • 54 ಬಚ್ಲೂತನ ಮಕ್ಕಳು, ಮೆಹೀದನ ಮಕ್ಕಳು, ಹರ್ಷನ ಮಕ್ಕಳು,
  • 55 ಬರ್ಕೋ ಸನ ಮಕ್ಕಳು ಸೀಸೆರನ ಮಕ್ಕಳು, ತೆಮಹನ ಮಕ್ಕಳು,
  • 56 ನೆಚೀಹನ ಮಕ್ಕಳು, ಹಟೀಫನ ಮಕ್ಕಳು.
  • 57 ಸೊಲೋಮೋನನ ಸೇವಕರ ಮಕ್ಕಳು ಯಾರಂದರೆ--ಸೋಟೈಯ ಮಕ್ಕಳು, ಸಫೆರತಳು ಮಕ್ಕಳು, ಪೆರೀದನ ಮಕ್ಕಳು
  • 58 ಯಾಲನ ಮಕ್ಕಳು, ದರ್ಕೋನನ ಮಕ್ಕಳು, ಗಿದ್ದೇಲನ ಮಕ್ಕಳು,
  • 59 ಶೆಫ ಟ್ಯನ ಮಕ್ಕಳು, ಹಟ್ಟೇಲನ ಮಕ್ಕಳು, ಹಚ್ಚೆಬಾಯಾಮಿನ, ಪೋಕೆರತನ ಮಕ್ಕಳು,
  • 60 ಅಮೋನನ ಮಕ್ಕಳುನೆತಿನಿಯರೂ ಸೊಲೊಮೋನನ ಸೇವಕರ ಮಕ್ಕಳೂ ಕೂಡ ಮುನ್ನೂರ ತೊಂಭತ್ತೆರಡು ಮಂದಿಯು.
  • 61 ತೇಲ್ಮೆ ಲಹ ಗುಡ್ಡವು, ತೇಲ್ಹರ್ಷ ಗುಡ್ಡವು, ಕೆರೂಬದ್ದೋನ್‌, ಇಮ್ಮೇರ್‌ ಎಂಬ ಸ್ಥಳಗಳಿಂದ ಹೊರಟು ತಾವು ಇಸ್ರಾಯೇಲ್ಯರು ಹೌದೋ ಅಲ್ಲವೋ ಎಂದು ತಮ್ಮ ತಂದೆಗಳ ಮನೆಯನ್ನಾದರೂ ತಮ್ಮ ಸಂತಾನವನ್ನಾ ದರೂ ತೋರಿಸಲಾರದೆ ಇದ್ದವರು ಯಾರಂದರೆ
  • 62 ದೆಲಾಯನ ಮಕ್ಕಳೂ ಟೋಬೀಯನ ಮಕ್ಕಳೂ ನೆಕೋದನ ಮಕ್ಕಳೂ ಆರು ನೂರ ನಾಲ್ವತ್ತೆರಡು ಮಂದಿಯು.
  • 63 ಯಾಜಕರಲ್ಲಿ -- ಹೋಬಾಯನ ಮಕ್ಕಳೂ ಬರ್ಜಿಲ್ಲೈಯನ ವಂಶಸ್ಥನಾದ ಹಕ್ಕೋಚನ ಮಕ್ಕಳೂ; ಇವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಕುಮಾರ್ತೆಯರಲ್ಲಿ ಒಬ್ಬಳನ್ನು ತಕ್ಕೊಂಡ ಕಾರಣ ಅವರ ಹೆಸರಿನಿಂದ ಕರೆಯಲ್ಪಟ್ಟವನಾದನು.
  • 64 ಇವರು ವಂಶಾವಳಿಯಾಗಿ ಬರೆಯಲ್ಪಟ್ಟವರಲ್ಲಿ ತಮ್ಮ ಹೆಸರು ಗಳನ್ನು ಹುಡುಕಿದರು; ಆದರೆ ಸಿಕ್ಕದೆ ಹೋದದ ರಿಂದ ಅವರು ಅಶುಚಿಯಾದವರೆಂದು ಎಣಿಸಲ್ಪಟ್ಟು ಯಾಜಕ ಉದ್ಯೋಗದಿಂದ ತೆಗೆದುಹಾಕಲ್ಪಟ್ಟರು.
  • 65 ಇದಲ್ಲದೆ ತಿರ್ಷತನು ಅವರಿಗೆ ಊರಿಮ್‌ ತುವ್ಮೆಾಮ್‌ ಉಳ್ಳ ಒಬ್ಬ ಯಾಜಕನು ನಿಲ್ಲುವ ವರೆಗೆ ಮಹಾಪರಿಶುದ್ಧವಾದವುಗಳನ್ನು ತಿನ್ನಬಾರದೆಂದು ಹೇಳಿದನು.
  • 66 ಈ ಸಭೆಯವರೆಲ್ಲಾ ನಾಲ್ವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿಯಾಗಿದ್ದರು.
  • 67 ಇವರ ಹೊರತಾಗಿ ಇವರ ದಾಸರೂ ದಾಸಿಗಳೂ ಏಳು ಸಾವಿ ರದ ಮುನ್ನೂರ ಮೂವತ್ತೇಳು ಮಂದಿಯೂ ಇವರ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರ ನಾಲ್ವತ್ತೈದು ಮಂದಿಯೂ ಇದ್ದರು.
  • 68 ಇವರ ಕುದುರೆ ಗಳು ಏಳು ನೂರಮೂವತ್ತಾರು, ಇವರ ಹೇಸರಕತ್ತೆಗಳು ಇನ್ನೂರ ನಾಲ್ವತ್ತೈದು;
  • 69 ಒಂಟೆಗಳು ನಾನೂರ ಮೂವತ್ತೈದು; ಕತ್ತೆಗಳು ಆರು ಸಾವಿರದ ಏಳು ನೂರ ಇಪ್ಪತ್ತು ಇದ್ದವು.
  • 70 ಪಿತೃಗಳಲ್ಲಿ ಮುಖ್ಯರಾದ ಕೆಲವರು ಕೆಲಸಕ್ಕೆ ಕಾಣಿಕೆಗಳನ್ನು ಕೊಟ್ಟರು. ತಿರ್ಷತನು ಬೊಕ್ಕಸಕ್ಕೆ ಸಾವಿರ ಬಂಗಾರದ ಪವನುಗಳನ್ನು ಐವತ್ತು ಪಾತ್ರೆ ಗಳನ್ನೂ ಐನೂರ ಮೂವತ್ತು ಯಾಜಕರ ಅಂಗಿಗ ಳನ್ನೂ ಕೊಟ್ಟನು.
  • 71 ಇದಲ್ಲದೆ ಪಿತೃಗಳಲ್ಲಿ ಮುಖ್ಯ ರಾದ ಕೆಲವರು ಕೆಲಸದ ಬೊಕ್ಕಸಕ್ಕೆ ಇಪ್ಪತ್ತು ಸಾವಿರ ಬಂಗಾರದ ಪವನುಗಳನ್ನೂ ಎರಡು ಸಾವಿರದ ಇನ್ನೂರು ತೊಲೆ ಬೆಳ್ಳಿಯನ್ನೂ ಕೊಟ್ಟರು.
  • 72 ಮಿಕ್ಕಾದ ಜನರು ಕೊಟ್ಟದ್ದೇನಂದರೆ, ಇಪ್ಪತ್ತು ಸಾವಿರ ಬಂಗಾರದ ಪವನುಗಳನ್ನು ಎರಡುಸಾವಿರ ತೊಲೆ ಬೆಳ್ಳಿಯನ್ನೂ ಅರುವತ್ತೇಳು ಯಾಜಕರ ಅಂಗಿಗಳನ್ನೂ ಕೊಟ್ಟರು.
  • 73 ಹೀಗೇಯೇ ಯಾಜಕರೂ ಲೇವಿಯರೂ ದ್ವಾರ ಪಾಲಕರೂ ಹಾಡುಗಾರರೂ ಜನರಲ್ಲಿ ಕೆಲವರೂ ನೆತಿನಿಯರೂ ಸಮಸ್ತ ಇಸ್ರಾಯೇಲ್ಯರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸವಾಗಿದ್ದರು. ಏಳನೇ ತಿಂಗಳು ಬಂದಾಗ ಇಸ್ರಾಯೇಲನ ಮಕ್ಕಳು ತಮ್ಮ ತಮ್ಮ ಪಟ್ಟಣಗಳಲ್ಲಿದ್ದರು.