ಅರಣ್ಯಕಾಂಡ 21
  • 1 ಇದಲ್ಲದೆ ಇಸ್ರಾಯೇಲ್ಯರು ಪಾಳತಿ ನೋಡುವ ಮಾರ್ಗದಿಂದ ಬರುತ್ತಾ ರೆಂದು ದಕ್ಷಿಣದಲ್ಲಿ ವಾಸಿಸುವ ಕಾನಾನ್ಯನಾದ ಅರಾದ್‌ ಪಟ್ಟಣದ ಅರಸನು ಕೇಳಿ ಅವರ ಸಂಗಡ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಯಾಗಿ ಒಯ್ದನು.
  • 2 ಆಗ ಇಸ್ರಾಯೇಲು ಕರ್ತನಿಗೆ ಪ್ರಮಾಣಮಾಡಿ ಹೇಳಿದ್ದೇನಂದರೆ--ನೀನು ಈ ಜನರನ್ನು ನನ್ನ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ ನಾನು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.
  • 3 ಆಗ ಕರ್ತನು ಇಸ್ರಾಯೇಲ್ಯರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಕೊಟ್ಟುಬಿಟ್ಟನು; ಇಸ್ರಾಯೇಲ್ಯರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅವರು ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
  • 4 ಅವರು ಹೋರ್‌ ಎಂಬ ಬೆಟ್ಟದಿಂದ ಹೊರಟು ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವ ದಕ್ಕೆ ಕೆಂಪುಸಮುದ್ರದ ಮಾರ್ಗವಾಗಿ ಪ್ರಯಾಣ ಮಾಡಿದರು. ಆದರೆ ಜನರು ಮಾರ್ಗದ ಆಯಾಸ ದಿಂದ ಬಹಳವಾಗಿ ಕುಂದಿಹೋದರು,
  • 5 ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ--ನಾವು ಅರಣ್ಯದಲ್ಲಿ ಸಾಯುವಹಾಗೆ ನಮ್ಮನ್ನು ಐಗುಪ್ತದೇಶದಿಂದ ಯಾಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ; ನಾವು ಈ ನಿಸ್ಸಾರ ವಾದ ರೊಟ್ಟಿಯನ್ನು ತಿಂದು ಅಸಹ್ಯಪಡುತ್ತೇವೆ ಅಂದರು.
  • 6 ಆಗ ಕರ್ತನು ಜನರೊಳಗೆ ಉರಿ ಸರ್ಪ ಗಳನ್ನು ಕಳುಹಿಸಿದನು; ಅವು ಜನರನ್ನು ಕಚ್ಚಿದ್ದರಿಂದ ಇಸ್ರಾಯೇಲ್ಯರಲ್ಲಿ ಬಹು ಜನರು ಸತ್ತುಹೋದರು.
  • 7 ಆದದರಿಂದ ಜನರು ಮೋಶೆಯ ಬಳಿಗೆ ಬಂದು --ನಾವು ಕರ್ತನಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ; ಆತನು ನಮ್ಮಿಂದ ಸರ್ಪಗಳನ್ನು ದೂರ ಮಾಡುವ ಹಾಗೆ ಆತನಿಗೆ ಪ್ರಾರ್ಥನೆಮಾಡು ಅಂದರು. ಮೋಶೆಯು ಜನರಿ ಗೋಸ್ಕರ ಪ್ರಾರ್ಥನೆಮಾಡಿದನು.
  • 8 ಆಗ ಕರ್ತನು ಮೋಶೆಗೆ ಹಿತ್ತಾಳೆಯಿಂದ ಉರಿ ಸರ್ಪದ ಆಕಾರದಲ್ಲಿ ಒಂದನ್ನು ಮಾಡಿಸಿಕೊಂಡು ಕಂಬದ ಮೇಲೆ ಇಡು; ಆಗ ಕಚ್ಚಲ್ಪಟ್ಟವರೆಲ್ಲರು ಅದರ ಮೇಲೆ ದೃಷ್ಟ್ಪಿಯಿಟ್ಟರೆ ಬದುಕುವರು ಅಂದನು.
  • 9 ಮೋಶೆಯು ಹಿತ್ತಾಳೆಯ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟಾಗ ಆದದ್ದೇನಂದರೆ, ಸರ್ಪವು ಕಚ್ಚಿದ ಮನುಷ್ಯನು ಹಿತ್ತಾಳೆಯ ಸರ್ಪದ ಕಡೆಗೆ ನೋಡಿದಾಗ ಬದುಕಿದನು.
  • 10 ಇಸ್ರಾಯೇಲ್‌ ಮಕ್ಕಳು ಹೊರಟು ಓಬೋತಿನಲ್ಲಿ ಇಳುಕೊಂಡರು.
  • 11 ಓಬೋತಿನಿಂದ ಹೊರಟು ಮೋವಾಬ್‌ ದೇಶಕ್ಕೆ ದುರಾಗಿ ಸೂರ್ಯೋದಯದ ಕಡೆಯಲ್ಲಿರುವ ಅರಣ್ಯದಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳುಕೊಂಡರು.
  • 12 ಅಲ್ಲಿಂದ ಅವರು ಹೊರಟು ಜೆರೆದೆಂಬ ತಗ್ಗಿನಲ್ಲಿ ಇಳುಕೊಂಡರು.
  • 13 ಅಲ್ಲಿಂದ ಹೊರಟು ಅಮೋರಿ ಯರ ಮೇರೆಯಿಂದ ಹೊರಗೆ ಬರುವ ಅರಣ್ಯದಲ್ಲಿ ರುವ ಅರ್ನೋನಿನ ಈಚೆಯಲ್ಲಿ ಇಳುಕೊಂಡರು; ಅರ್ನೋನು ಮೋವಾಬ್ಯರಿಗೂ ಅಮೋರಿಯರಿಗೂ ಮಧ್ಯವಾದ ಮೋವಾಬಿನ ಮೇರೆಯಾಗಿದೆ.
  • 14 ಆದ ಕಾರಣ ಕರ್ತನ ಯುದ್ಧಗಳ ಪುಸ್ತಕದಲ್ಲಿ ಆತನು ಕೆಂಪು ಸಮುದ್ರದಲ್ಲಿಯೂ ಅರ್ನೋನಿನ ಹಳ್ಳಗಳಲ್ಲಿಯೂ
  • 15 ಆರಿನ ನಿವಾಸಕ್ಕೆ ತಿರುಗಿ ಮೋವಾಬಿನ ಮೇರೆಗೆ ಒರಗಿರುವ ಹಳ್ಳಗಳ ಪ್ರವಾಹಕ್ಕೂ ಏನು ಮಾಡಿದನು ಎಂದು ಹೇಳಿದೆ.
  • 16 ಅಲ್ಲಿಂದ ಅವರು ಬೇರಕ್ಕೆ ಬಂದರು; ಕರ್ತನು ಮೋಶೆಗೆ--ಜನರನ್ನು ಕೂಡಿಸಿಕೋ; ನಾನು ಅವರಿಗೆ ನೀರನ್ನು ಕೊಡುವೆನೆಂದು ಕರ್ತನು ಮೋಶೆಗೆ ಹೇಳಿದ ಬಾವಿ ಅದೇ.
  • 17 ಆಗ ಇಸ್ರಾಯೇಲ್ಯರು ಈ ಹಾಡನ್ನು ಹಾಡಿದರು; ಏನಂದರೆ--ಓ ಬಾವಿಯೇ, ಉಕ್ಕು; ಅದಕ್ಕೆ ನೀವು ಹಾಡಿರಿ.
  • 18 ಪ್ರಭುಗಳು ಈ ಬಾವಿಯನ್ನು ಅಗೆದರು; ಜನರ ಅಧಿಪತಿಗಳು ನ್ಯಾಯಾಧಿಪತಿಯ ಸಲಹೆಯ ಮೇರೆಗೆ ತಮ್ಮ ಕೋಲುಗಳಿಂದ ಅದನ್ನು ತೋಡಿದರು. ಅವರು ಅರಣ್ಯದಿಂದ ಮತ್ತಾನಕ್ಕೂ
  • 19 ಇದಲ್ಲದೆ ಅವರು ಮತ್ತಾನದಿಂದ ನಹಲೀಯೇ ಲಕ್ಕೂ ನಹಲೀಯೇಲದಿಂದ ಬಾಮೋತಿಗೂ ಬಂದರು.
  • 20 ಬಾಮೋತಿನಿಂದ ಮೋವಾಬ್‌ ದೇಶದಲ್ಲಿ ರುವ ಕಣಿವೆಯಿಂದ ಪಿಸ್ಗಾವೆಂಬ ಬೆಟ್ಟದ ತುದಿಗೆ ಬಂದರು; ಇದು ಯೇಷೀಮೋನಿನ ಕಡೆಗೆ ಕಾಣಿಸುತ್ತದೆ.
  • 21 ಆಗ ಇಸ್ರಾಯೇಲ್ಯರು ಅಮೋರಿಯರ ಅರಸ ನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--
  • 22 ನಾವು ನಿನ್ನ ದೇಶದಲ್ಲಿ ದಾಟಿ ಹೋಗಬೇಕು; ನಾವು ಹೊಲದಲ್ಲಾದರೂ ದ್ರಾಕ್ಷೇ ತೋಟದಲ್ಲಾದರೂ ತಿರುಗಿ ಕೊಳ್ಳದೆ ಬಾವಿಯ ನೀರನ್ನು ಕುಡಿಯದೆ ನಿನ್ನ ಮೇರೆಯನ್ನು ದಾಟುವ ವರೆಗೆ ರಾಜಮಾರ್ಗದಲ್ಲಿ ಹೋಗುತ್ತೇವೆ.
  • 23 ಆದರೆ ಸೀಹೋನನು ಇಸ್ರಾಯೇಲ್ಯರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ ತನ್ನ ಜನರೆಲ್ಲರನ್ನು ಕೂಡಿಸಿಕೊಂಡು ಇಸ್ರಾಯೇಲ್ಯರಿಗೆದುರಾಗಿ ಅರಣ್ಯಕ್ಕೆ ಹೊರಟನು; ಅವನು ಯಹಚಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದನು.
  • 24 ಇಸ್ರಾಯೇಲ್ಯರು ಅವನನ್ನು ಕತ್ತಿಯಿಂದ ಹೊಡೆದು ಅವನ ದೇಶವನ್ನು ಅರ್ನೋನ್‌ ನದಿಯಿಂದ ಯಬ್ಬೋಕ್‌ ನದಿಯ ವರೆಗೂ ಅಮ್ಮೋನನ ಮಕ್ಕಳ ಮೇರೆಯ ವರೆಗೂ ಸ್ವಾಧೀನಮಾಡಿಕೊಂಡರು. ಅಮ್ಮೋನನ ಮಕ್ಕಳ ಮೇರೆ ಬಲವುಳ್ಳದ್ದಾಗಿತ್ತು.
  • 25 ಇಸ್ರಾಯೇಲ್ಯರು ಆ ಪಟ್ಟಣಗಳನ್ನೆಲ್ಲಾ ತೆಗೆದು ಕೊಂಡರು; ಇಸ್ರಾಯೇಲ್ಯರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.
  • 26 ಹೆಷ್ಬೋನು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು; ಅವನು ಮೋವಾಬ್ಯರ ಪೂರ್ವದ ಅರಸನ ಸಂಗಡ ಯುದ್ಧಮಾಡಿ ಅವನ ಸಮಸ್ತ ದೇಶವನ್ನು ಅರ್ನೋನ್‌ ನದಿಯ ಪರ್ಯಂತರ ಅವನಿಂದ ವಶಪಡಿಸಿಕೊಂಡನು.
  • 27 ಅವರು ಸಾಮತಿ ಗಳಲ್ಲಿ ಮಾತನಾಡಿ -- ಹೆಷ್ಬೋನಿಗೆ ಬನ್ನಿರಿ; ಸೀಹೋನನ ಪಟ್ಟಣವು ತಿರಿಗಿ ಕಟ್ಟಲ್ಪಟ್ಟು ಸಿದ್ಧವಾಗಲಿ.
  • 28 ಬೆಂಕಿ ಹೆಷ್ಬೋನಿನಿಂದಲೂ ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು ಮೋವಾಬಿನ ಆರ್‌ ಎಂಬ ಪಟ್ಟಣವನ್ನೂ ಅರ್ನೋನಿನ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.
  • 29 ಮೋವಾಬೇ, ನಿನಗೆ ಅಯ್ಯೋ! ಓ ಕೇಮೋಷಿನ ಜನವೇ, ನಿಮಗೆ ದುರ್ಗತಿ ಉಂಟಾಯಿತಲ್ಲಾ; ಅವನು ತಪ್ಪಿಸಿಕೊಂಡ ತನ್ನ ಕುಮಾರ ಕುಮಾರ್ತೆಯರನ್ನು ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಕೊಟ್ಟನು.
  • 30 ನಾವು ಅವರ ಮೇಲೆ ಬಾಣಗಳನ್ನು ಎಸೆದೆವು; ಹೆಷ್ಬೋನು ದೀಬೋನಿನ ವರೆಗೂ ನಾಶವಾಯಿತು; ನಾವು ಅವ ರನ್ನು ಮೇದೆಬಾಗೆ ಮುಟ್ಟುವ ನೋಫಹದ ಮಟ್ಟಿಗೂ ಹಾಳುಮಾಡಿದೆವು ಅಂದರು.
  • 31 ಹಾಗೆ ಇಸ್ರಾಯೇ ಲ್ಯರು ಅಮೋರಿಯ ದೇಶದಲ್ಲಿ ವಾಸಮಾಡಿದರು.
  • 32 ಇದಲ್ಲದೆ ಮೋಶೆಯು ಯಗ್ಜೇರನ್ನು ಪಾಳತಿ ನೋಡುವದಕ್ಕೆ ಕಳುಹಿಸಿದನು; ಅವರು ಅವರ ಗ್ರಾಮ ಗಳನ್ನು ವಶಪಡಿಸಿಕೊಂಡು ಅಲ್ಲಿರುವ ಅಮೋರಿಯ ರನ್ನು ಹೊರಡಿಸಿಬಿಟ್ಟರು.
  • 33 ಆಗ ಅವರು ತಿರುಗಿ ಬಾಷಾನಿನ ಹಾದಿಯಲ್ಲಿ ಏರಿದರು; ಆಗ ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.
  • 34 ಕರ್ತನು ಮೋಶೆಯ ಸಂಗಡ ಹೇಳಿದ್ದೇನಂದರೆ--ನೀನು ಅವ ನಿಗೆ ಭಯಪಡಬೇಡ; ನಿನ್ನ ಕೈಯೊಳಗೆ ನಾನು ಅವನನ್ನೂ ಅವನ ಸಮಸ್ತ ಜನರನ್ನೂ ದೇಶವನ್ನೂ ಕೊಟ್ಟಿದ್ದೇನೆ. ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿ ಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು.
  • 35 ಈ ಪ್ರಕಾರ ಅವರು ಅವ ನನ್ನೂ ಅವನ ಮಕ್ಕಳನ್ನೂ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು ಅವನ ದೇಶವನ್ನು ವಶಮಾಡಿಕೊಂಡರು.