ಆದಿಕಾಂಡ 45
  • 1 ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿ ಹಿಡುಕೊಳ್ಳಲಾರದೆ--ಎಲ್ಲರನ್ನೂ ನನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪ್ರಕಟಿಸಿ ಕೊಂಡಾಗ ಅಲ್ಲಿ ಬೇರೆ ಯಾರೂ ಇರಲಿಲ್ಲ.
  • 2 ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ ಐಗುಪ್ತ್ಯರೂ ಫರೋಹನ ಮನೆಯವರೂ ಕೇಳಿಸಿಕೊಂಡರು.
  • 3 ಯೋಸೇಫನು ತನ್ನ ಸಹೋದರರಿಗೆ--ನಾನು ಯೋಸೇಫನು, ನನ್ನ ತಂದೆಯು ಇನ್ನೂ ಬದುಕಿ ದ್ದಾನೋ ಅಂದನು. ಅದಕ್ಕೆ ಅವನ ಸಹೋದರರು ಅವನ ಮುಂದೆ ಕಳವಳಗೊಂಡವರಾಗಿ ಅವನಿಗೆ ಉತ್ತರ ಕೊಡಲಾರದೆ ಹೋದರು.
  • 4 ಆಗ ಯೋಸೇಫನು ತನ್ನ ಸಹೋದರರಿಗೆ--ನನ್ನ ಬಳಿಗೆ ಬನ್ನಿರಿ ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು--ನೀವು ಐಗುಪ್ತಕ್ಕೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ.
  • 5 ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟು ಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ.
  • 6 ಈ ಎರಡು ವರುಷಗಳ ವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರುಷಗಳ ವರೆಗೆ ಬಿತ್ತುವದೂ ಕೊಯ್ಯುವದೂ ಇರುವದಿಲ್ಲ.
  • 7 ಆದದ ರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವ ದಕ್ಕೂ ದೊಡ್ಡ ಬಿಡುಗಡೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸುವದಕ್ಕೂ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ.
  • 8 ಆದದರಿಂದ ಈಗ ನೀವಲ್ಲ, ದೇವರು ತಾನೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಆತನು ನನ್ನನ್ನು ಫರೋಹನಿಗೆ ತಂದೆಯಾಗಿಯೂ ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಐಗುಪ್ತ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾನೆ.
  • 9 ನೀವು ಶೀಘ್ರವಾಗಿ ನನ್ನ ತಂದೆಯ ಬಳಿಗೆ ಹೊರಟುಹೋಗಿ ಅವನಿಗೆ--ನಿನ್ನ ಮಗನಾದ ಯೋಸೇಫನು--ದೇವರು ನನ್ನನ್ನು ಐಗುಪ್ತಕ್ಕೆಲ್ಲಾ ಪ್ರಭುವನ್ನಾಗಿ ಮಾಡಿದ್ದಾನೆ; ತಡ ಮಾಡದೆ ನನ್ನ ಬಳಿಗೆ ಇಳಿದು ಬಾ;
  • 10 ಗೋಷೆನ್‌ ದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ ಮೊಮ್ಮಕ್ಕಳೂ ದನ ಕುರಿಗಳೂ ನಿನಗಿದ್ದದ್ದೆಲ್ಲವೂ ನನ್ನ ಸವಿಾಪ ದಲ್ಲಿರಬೇಕು;
  • 11 ಅಲ್ಲಿ ನಿನ್ನನ್ನು ಪೋಷಿಸುವೆನು. ಯಾಕಂದರೆ ಇನ್ನೂ ಕ್ಷಾಮದ ಐದು ವರುಷಗಳಿವೆ. ನಿನಗೂ ನಿನ್ನ ಮನೆಗೂ ನಿನಗಿರುವದೆಲ್ಲದಕ್ಕೂ ಬಡತನವಾಗಬಾರದು ಎಂದು ಹೇಳಿರಿ.
  • 12 ಇಗೋ, ನಿಮ್ಮ ಸಂಗಡ ಮಾತನಾಡುವದು ನನ್ನ ಬಾಯಿಯೇ ಎಂದು ನಿಮ್ಮ ಕಣ್ಣುಗಳೂ ನನ್ನ ಸಹೋದರನಾದ ಬೆನ್ಯಾವಿಾನನ ಕಣ್ಣುಗಳೂ ನೋಡುತ್ತವೆ.
  • 13 ಹೀಗಿರ ಲಾಗಿ ನೀವು ಐಗುಪ್ತದೇಶದಲ್ಲಿ ನನಗಿರುವ ಎಲ್ಲಾ ಘನವನ್ನೂ ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ ಅಂದನು.
  • 14 ಅವನು ತನ್ನ ತಮ್ಮನಾದ ಬೆನ್ಯಾವಿಾನನ ಕೊರಳನ್ನು ಅಪ್ಪಿ ಕೊಂಡು ಅತ್ತನು; ಬೆನ್ಯಾವಿಾನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು.
  • 15 ಇದಲ್ಲದೆ ತನ್ನ ಸಹೋದರ ರಿಗೆಲ್ಲಾ ಮುದ್ದಿಟ್ಟು ಅವರನ್ನು ಹಿಡುಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.
  • 16 ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ ಅವನ ಸೇವಕರಿಗೂ ಅದು ಮೆಚ್ಚಿಕೆಯಾಗಿತ್ತು.
  • 17 ಫರೋಹನು ಯೋಸೇಫ ನಿಗೆ--ನಿನ್ನ ಸಹೋದರರಿಗೆ--ನೀವು ಹೀಗೆ ಮಾಡಿರಿ; ನಿಮ್ಮ ಪಶುಗಳ ಮೇಲೆ ಸಾಮಾಗ್ರಿಗಳನ್ನು ಹೇರಿ ಕಾನಾನ್‌ ದೇಶಕ್ಕೆ ಹೋಗಿ
  • 18 ನಿಮ್ಮ ತಂದೆಯನ್ನೂ ನಿಮ್ಮ ನಿಮ್ಮ ಮನೆಯವರನ್ನೂ ಕರಕೊಂಡು ನನ್ನ ಬಳಿಗೆ ಬನ್ನಿರಿ. ಐಗುಪ್ತದೇಶದ ಉತ್ತಮವಾದದ್ದನ್ನು ನಾನು ನಿಮಗೆ ಕೊಡುವೆನು. ಈ ದೇಶದ ಸಾರವನ್ನು ಊಟಮಾಡುವಿರಿ.
  • 19 ಇದನ್ನು ಮಾಡುವಂತೆ ನಿಮಗೆ ಅಪ್ಪಣೆಯಾಯಿತು; ಐಗುಪ್ತದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ ಹೆಂಡತಿಯರಿಗಾಗಿಯೂ ಬಂಡಿ ಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ತಂದೆಯನ್ನು ಕರಕೊಂಡು ಬನ್ನಿರಿ.
  • 20 ನಿಮ್ಮ ಸಾಮಾನುಗಳಿಗಾಗಿ ಚಿಂತಿಸಬೇಡಿರಿ; ಐಗುಪ್ತದೇಶದಲ್ಲಿರುವ ಉತ್ತಮ ವಾದದ್ದೆಲ್ಲಾ ನಿಮ್ಮದೇ ಎಂದು ಹೇಳು ಅಂದನು.
  • 21 ಇಸ್ರಾಯೇಲನ ಮಕ್ಕಳು ಹಾಗೆಯೇ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ಬಂಡಿಗಳನ್ನೂ ಮಾರ್ಗಕ್ಕೋಸ್ಕರ ಆಹಾರ ವನ್ನೂ ಕೊಟ್ಟನು.
  • 22 ಅವರೆಲ್ಲರಿಗೆ ಒಂದೊಂದು ಜೊತೆ ವಸ್ತ್ರಗಳನ್ನೂ ಬೆನ್ಯಾವಿಾನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಐದು ಜೊತೆ ವಸ್ತ್ರಗಳನ್ನೂ ಕೊಟ್ಟನು.
  • 23 ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಐಗುಪ್ತದ ಶೇಷ್ಠವಾದ ವುಗಳನ್ನೂ ಪ್ರಯಾಣಕ್ಕೋಸ್ಕರ ತನ್ನ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿರೊಟ್ಟಿ ಆಹಾರ ಗಳನ್ನೂ ಕಳುಹಿಸಿದನು.
  • 24 ಅವನು ಅವರಿಗೆ--ಮಾರ್ಗದಲ್ಲಿ ಜಗಳವಾಡಬೇಡಿರಿ ಎಂದು ಅವರಿಗೆ ಹೇಳಿದ ಮೇಲೆ ಅವರು ಹೋದರು.
  • 25 ಅವರು ಐಗುಪ್ತದಿಂದ ಹೋರಟುಹೋಗಿ ಕಾನಾನಿನಲ್ಲಿದ್ದ ಅವರ ತಂದೆಯಾದ ಯಾಕೋಬನ ಬಳಿಗೆ ಬಂದು--
  • 26 ಯೋಸೇಫನು ಇನ್ನೂ ಜೀವದಿಂದ ಇದ್ದಾನೆ; ಅವನೇ ಐಗುಪ್ತದೇಶವನ್ನೆಲ್ಲಾ ಆಳುತಿದ್ದಾ ನೆಂದು ಅವನಿಗೆ ತಿಳಿಸಿದಾಗ ಅವನು ನಂಬದೆ ಇದ್ದದ್ದರಿಂದ ಹೃದಯವು ಕುಂದಿಹೋಯಿತು.
  • 27 ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದ್ದಲ್ಲದೆ ಅವನನ್ನು ಕರಕೊಂಡು ಹೋಗುವದಕ್ಕೆ ಯೋಸೇಫನು ಕಳುಹಿಸಿದ ಬಂಡಿಗಳನ್ನು ಅವನು ನೋಡಿದಾಗ ಅವರ ತಂದೆಯಾದ ಯಾಕೋಬನ ಆತ್ಮವು ಉಜ್ಜೀ ವಿಸಿತು.
  • 28 ಆಗ ಇಸ್ರಾಯೇಲನು--ನನ್ನ ಮಗನಾದ ಯೋಸೇಫನು ಇನ್ನೂ ಜೀವದಿಂದಿದ್ದಾನೆ, ಅದು ಸಾಕು; ನಾನು ಸಾಯುವದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುವೆನು ಅಂದನು.