ಯೋಬ 38
  • 1 ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು--
  • 2 ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು?
  • 3 ಪುರುಷನ ಹಾಗೆ ನಡುವನ್ನು ಕಟ್ಟಿಕೋ; ನಾನು ನಿನ್ನನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು.
  • 4 ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು.
  • 5 ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು?
  • 6 ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು?
  • 7 ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು.
  • 8 ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು?
  • 9 ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ
  • 10 ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು.
  • 11 ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು.
  • 12 ನಿನ್ನ ದಿವಸಗಳಾರಭ್ಯ ಬೆಳಿಗ್ಗೆಗೆ ಅಪ್ಪಣೆ ಕೊಟ್ಟಿಯೋ?
  • 13 ಅದು ಭೂಮಿಯ ಅಂಚುಗಳನ್ನು ಹಿಡಿಯುವ ಹಾಗೆಯೂ ದುಷ್ಟರು ಅದರೊಳಗಿಂದ ಝಾಡಿಸಲ್ಪಡುವ ಹಾಗೆಯೂ ಉದಯಕ್ಕೆ ಅದರ ಸ್ಥಳವನ್ನು ತಿಳಿಯಪಡಿಸಿದಿಯೋ?
  • 14 ಮುದ್ರೆಯಿಂದ ಮಣ್ಣು ಆಗುವ ಹಾಗೆ ಅದು ಮಾರ್ಪಡುತ್ತದೆ; ವಸ್ತ್ರದ ಹಾಗೆ ಅದು ನಿಂತಿರುತ್ತದೆ.
  • 15 ದುಷ್ಟರಿಂದ ಅವರ ಬೆಳಕು ಹಿಂತೆಗೆಯಲ್ಪಡುತ್ತದೆ. ಎತ್ತಿದ ತೋಳು ಮುರಿದು ಹೋಗುವದು.
  • 16 ನೀನು ಸಮುದ್ರದ ಬುಗ್ಗೆಗಳಲ್ಲಿ ಪ್ರವೇಶಿಸಿ ಇಲ್ಲವೆ ಅಗಾಧವನ್ನು ಹುಡುಕುವದರಲ್ಲಿ ನೀನು ತಿರುಗಾಡಿ ದಿಯೋ?
  • 17 ನಿನಗೆ ಮರಣದ ಬಾಗಲುಗಳು ತೆರೆಯ ಲ್ಪಟ್ಟವೋ? ಇಲ್ಲವೆ ಮರಣದ ನೆರಳಿನ ಬಾಗಲುಗಳನ್ನು ನೀನು ನೋಡಿದಿಯೋ?
  • 18 ಭೂಮಿಯ ವಿಸ್ತಾರ ಗಳವರೆಗೆ ನೀನು ಗ್ರಹಿಸಿದಿಯೋ?ಇದನ್ನೆಲ್ಲಾ ತಿಳು ಕೊಂಡರೆ ತಿಳಿಯಪಡಿಸು.
  • 19 ಬೆಳಕಿನ ನಿವಾಸಕ್ಕೆ ದಾರಿ ಯಾವದು? ಕತ್ತಲೆ ಯಾದರೋ ಅದರ ಸ್ಥಳವೆಲ್ಲಿದೆ?
  • 20 ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ?
  • 21 ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ.
  • 22 ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ?
  • 23 ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ.
  • 24 ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು?
  • 25 ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು?
  • 26 ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು;
  • 27 ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು.
  • 28 ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು?
  • 29 ಯಾವನ ಹೊಟ್ಟೆಯೊಳಗಿಂದ ನೀರು ಗಡ್ಡೆ ಹೊರಡುತ್ತದೆ? ಆಕಾಶದ ಹಿಮವನ್ನು ಹುಟ್ಟಿಸಿ ದವನಾರು?
  • 30 ಕಲ್ಲಿನ ಹಾಗೆ ನೀರುಗಳು ಅಡಗುತ್ತವೆ; ಅಗಾಧದ ಮೇಲ್ಭಾಗವು ಹೆಪ್ಪುಗಟ್ಟುವದು.
  • 31 ನೀನು ವೃಷಭ ರಾಶಿಯ ಸಿಹಿ ಪರಿಣಾಮಗ ಳನ್ನು ಬಂಧಿಸುವಿಯೋ? ಇಲ್ಲವೆ ಮೃಗಶಿರದ ಸಂಕೋ ಲೆಗಳನ್ನು ಬಿಚ್ಚಬಲ್ಲಿಯೋ?
  • 32 ನೀನು ರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ತರುತ್ತೀಯೋ? ಇಲ್ಲವೆ ಸಪ್ತತಾರೆಗಳನ್ನು ಅವುಗಳ ಪುತ್ರರ ಸಹಿತ ವಾಗಿ ನೀನು ನಡಿಸುತ್ತೀಯೋ?
  • 33 ಆಕಾಶದ ಕಟ್ಟಳೆ ಗಳನ್ನು ನೀನು ತಿಳುಕೊಳ್ಳುತ್ತೀಯೋ? ಇಲ್ಲವೆ ಅದರ ಅಧಿಕಾರವನ್ನು ಭೂಮಿಯಲ್ಲಿ ನಿರ್ಣಯಿ ಸುತ್ತೀಯೋ?
  • 34 ನೀರಿನ ಸಮೃದ್ಧಿಯು ನಿನ್ನನ್ನು ಮುಚ್ಚುವ ಹಾಗೆ ನಿನ್ನ ಶಬ್ದವನ್ನು ಮೋಡಗಳ ಕಡೆಗೆ ಎತ್ತುತ್ತೀಯೋ?
  • 35 ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ?
  • 36 ಯಾವನು ಅಂತರ್ಯದಲ್ಲಿ ಜ್ಞಾನ ಇಡು ತ್ತಾನೆ; ಇಲ್ಲವೆ ಯಾವನು ಹೃದಯಕ್ಕೆ ಗ್ರಹಿಕೆಯನ್ನು ಕೊಟ್ಟಿದ್ದಾನೆ?
  • 37 ಯಾವನು ಮೋಡಗಳನ್ನು ಜ್ಞಾನ ದಿಂದ ಎಣಿಸುತ್ತಾನೆ;
  • 38 ದೂಳಿಯು ಗಟ್ಟಿಯಾಗುತ್ತಾ ಬರುವಾಗ ಮತ್ತು ಗಡ್ಡೆಗಳು ಒಟ್ಟಾಗಿ ಅಂಟುವಾಗ ಆಕಾಶದ ಬುದ್ಧಲಿಗಳನ್ನು ಹೊಯ್ಯುವವನಾರು?
  • 39 ಸಿಂಹಕ್ಕೋಸ್ಕರ ನೀನು ಬೇಟೆಯಾಡುವಿಯೋ?
  • 40 ಇಲ್ಲವೆ ಅವು ಗುಹೆಗಳಲ್ಲಿ ಕೂತುಕೊಳ್ಳುವಾಗ, ಗವಿಯಲ್ಲಿ ಹೊಂಚಿ ಮಲಗಿರುವಾಗ, ಪ್ರಾಯದ ಸಿಂಹಗಳ ಆಶೆಯನ್ನು ಪೂರೈಸುವಿಯೋ?
  • 41 ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು?