ಯೊಹೋಶುವ 15
  • 1 ಇದಲ್ಲದೆ ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವದಂದರೆ, ಕಟ್ಟ ಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಜಿನ್‌ ಅರಣ್ಯದ ದಕ್ಷಿಣ ಭಾಗವಾಗಿದೆ.
  • 2 ಉಪ್ಪು ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ ದಕ್ಷಿಣ ಪಾರ್ಶ್ವದ ಲ್ಲಿರುವ ಮಾಲೆಅಕ್ರಬ್ಬೀಮೆಂಬ ಕೊಲ್ಲಿಗಳಿಗೂ ಅಲ್ಲಿಂದ ಜೀನಿಗೂ
  • 3 ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್‌ ಬರ್ನೇಯಕ್ಕೂ ಅಲ್ಲಿಂದ ಹೆಬ್ರೋನ್‌ ಮಾರ್ಗವಾಗಿ ಕರ್ಕವನ್ನು ಸುತ್ತಿ ಅಚ್ಮೊನಿಗೂ
  • 4 ಅಲ್ಲಿಂದ ಐಗುಪ್ತದ ನದಿ ಹಿಡಿದು ಸಮುದ್ರದ ಪರಿಯಂತರ ಹೋಗಿ ಸೇರುವದು; ಇದೇ ನಿಮ್ಮ ದಕ್ಷಿಣ ಮೇರೆ.
  • 5 ಅದರ ಮೂಡಣ ಮೇರೆ ಯಾವದಂದರೆ: ಯೊರ್ದನಿನ ಕೊನೇಗಿರುವ ಉಪ್ಪು ಸಮುದ್ರವು. ಉತ್ತರ ಕಡೆಗೆ ಯೊರ್ದನಿನ ಹತ್ತಿರದಲ್ಲಿದ್ದ ಸಮುದ್ರದ ಕೊನೆಯ ವರೆಗೆ ಇತ್ತು;
  • 6 ಅಲ್ಲಿಂದ ಬೇತ್‌ಹೊಗ್ಲಾಕ್ಕೂ ಅಲ್ಲಿಂದ ಉತ್ತರಕ್ಕಿರುವ ಬೇತ್‌ಅರಾಬನ್ನು ದಾಟಿರೂಬೇನನ ಮಗನಾದ ಬೋಹನನ ಕಲ್ಲಿಗೂ
  • 7 ಅಲ್ಲಿಂದ ಆಕೋರ್‌ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಯ ದಕ್ಷಿಣ ಪಾರ್ಶ್ವವಾದ ಅದುವಿಾಮಿನ ಹೊಳೆಗೆ ಎದುರಾಗಿರುವ ಗಿಲ್ಗಾಲಿಗೂ ಅಲ್ಲಿಂದ ಏನ್‌ಷೆಮೆಷಿನ ನೀರಿಗೂ ಅಲ್ಲಿಂದ ಏನ್‌ರೋಗೆಲಿಗೂ
  • 8 ಅಲ್ಲಿಂದ ಯೆಬೂಸಿ ಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣ ಪಾರ್ಶ್ವವಾಗಿ ಹಿನ್ನೋಮನ ತಗ್ಗನ್ನು ದಾಟಿ ಉತ್ತರಕ್ಕಿರುವ ಯೆಬೂಸಿಯರ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕಾಗಿ ಹಿನ್ನೋಮ್‌ ತಗ್ಗಿನ ಮುಂದಿರುವ ಬೆಟ್ಟದ ತುದಿ ವರೆಗೂ
  • 9 ಆ ಬೆಟ್ಟದ ತುದಿಯಿಂದ ನೆಪ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣ ಗಳಿಗೂ ಅಲ್ಲಿಂದ ಕಿರ್ಯತ್ಯಾರೀಮ್‌ ಆದ ಬಾಲಾಕ್ಕೂ
  • 10 ಬಾಲಾದಿಂದ ಪಶ್ಚಿಮಕ್ಕಿರುವ ಸೇಯಾರ್‌ ಬೆಟ್ಟ ವನ್ನು ಸುತ್ತಿ ಅಲ್ಲಿಂದ ಉತ್ತರಕ್ಕಿರುವ ಕೆಸಾಲೋನಿನ ಯಾರೀಮ್‌ ಬೆಟ್ಟದ ಪಾರ್ಶ್ವಕ್ಕೂ ಅಲ್ಲಿಂದ ಬೇತ್‌ಷೆ ಮೆಷಿಗೆ ಇಳಿದು ತಿಮ್ನಾಗೆ
  • 11 ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಪಾರ್ಶ್ವವನ್ನು ಹಿಡಿದು ಶಿಕ್ಕೆರೋನಿಗೂ ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯೆಬ್ನೇಲಿಗೆ ಹೊರಟು ಸಮುದ್ರಕ್ಕೆ ಕಡೆಯಾಗುವದು.
  • 12 ಅದು ಪಶ್ಚಿಮದ ಮೇರೆಯ ದೊಡ್ಡ ಸಮುದ್ರವಾಗಿದೆ. ಇದೇ ಯೂದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.
  • 13 ಇದಲ್ಲದೆ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನಿಗೆ ಅನಾಕನ ತಂದೆಯ ಕಿರ್ಯಾತ್‌ಅರ್ಬ ಎಂಬ ಹೆಬ್ರೋನನ್ನು ಯೂದನ ಮಕ್ಕಳ ನಡುವೆ ಪಾಲಾಗಿ ಕೊಟ್ಟನು.
  • 14 ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ ಅಹೀಮನ್‌ ತಲ್ಮೈಯ ರನ್ನು ಹೊರಡಿಸಿಬಿಟ್ಟನು.
  • 15 ಕಾಲೇಬನು ಅಲ್ಲಿಂದ ಹೊರಟು--ಯಾವನು ಪೂರ್ವದಲ್ಲಿ ಕಿರ್ಯತ್‌ ಸೇಫರ್‌ ಎಂಬ ಹೆಸರು ಉಂಟಾಗಿದ್ದ ದೆಬೀರಿನ ವಾಸಿಗಳ ಬಳಿಗೆ ಹೋಗಿ
  • 16 ಅವನು ಕಿರ್ಯತ್‌ ಸೇಫೆರನ್ನು ಹೊಡೆದು ಹಿಡಿಯುವನೋ ಅವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡು ವೆನು ಎಂದು ಹೇಳಿದ್ದನು.
  • 17 ಆಗ ಕೆನಜನ ಮಗನೂ ಕಾಲೇಬನ ಸಹೋದರನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿ ಕೊಟ್ಟನು.
  • 18 ಅವಳು ಬಂದಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳನ್ನು ನೋಡಿ--ನಿನಗೆ ಏನು ಬೇಕು ಅಂದನು.
  • 19 ಅದಕ್ಕೆ ಅವಳು--ನನಗೆ ಒಂದು ಆಶೀರ್ವಾದ ಕೊಡು; ಯಾಕಂದರೆ ನನಗೆ ಮೊದಲು ದಕ್ಷಿಣ ಭೂಮಿಯನ್ನು ಕೊಟ್ಟಿ; ನೀರು ಬುಗ್ಗೆಗಳನ್ನು ಸಹ ನನಗೆ ಕೊಡು ಅಂದಳು. ಆಗ ಅವನು ಅವಳಿಗೆ ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ನೀರು ಬುಗ್ಗೆಗಳನ್ನು ಕೊಟ್ಟನು.
  • 20 ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬ ಗಳ ಪ್ರಕಾರ ಉಂಟಾದ ಸ್ವಾಸ್ತ್ಯವೇನಂದರೆ--
  • 21 ದಕ್ಷಿಣ ಕಡೆಗಿರುವ ಕಟ್ಟ ಕಡೆಯ ಎದೋಮಿನ ಮೇರೆಗೆ ಸರಿಯಾಗಿ ಯೂದನ ಮಕ್ಕಳ ಗೋತ್ರಕ್ಕೆ ಇರುವ ಪಟ್ಟಣಗಳು ಯಾವವಂದರೆ--ಕಬ್ಜೇಲ್‌, ಏದೆರ್‌, ಯಾಗೂರ್‌,
  • 22 ಕೀನಾ, ದೀಮೋನಾ, ಅದಾದಾ,
  • 23 ಕೇದೆಷ್‌, ಹಾಚೋರ್‌, ಇತ್ನಾನ್‌,
  • 24 ಜೀಫ್‌, ಟೆಲೆಮ್‌, ಬೆಯಾಲೋತ್‌,
  • 25 ಹಾಚೋರ್‌, ಹದತ್ತಾ, ಕಿರ್ಯೋತ್‌, ಹೆಜ್ರೋನ್‌ ಎಂಬ ಹಾಚೋರ್‌
  • 26 ಅಮಾಮ್‌, ಶೆಮ, ಮೋಲಾದ
  • 27 ಹಚರ್ಗದ್ದಾ, ಹೆಷ್ಮೋನ್‌, ಬೇತ್ಪೆಲೆಟ್‌,
  • 28 ಹಚರ್‌ಷೊವಾಲ್‌, ಬೇರ್ಷೆಬ, ಬಿಜ್ಯೋತ್ಯಾ
  • 29 ಬಾಲಾ, ಇಯ್ಯಾಮ್‌, ಎಚೆಮ್‌,
  • 30 ಎಲ್ಟೋಲದ್‌, ಕೆಸೀಲ್‌, ಹೊರ್ಮಾ,
  • 31 ಚಿಕ್ಲಗ್‌ ಮದ್ಮನ್ನಾ, ಸನ್ಸನ್ನಾ,
  • 32 ಲೆಬಾವೋತ್‌, ಶಿಲ್ಹೀಮ್‌, ಅಯಿನ್‌, ರಿಮ್ಮೋನ್‌ ಎಂಬವುಗಳೇ; ಅವುಗಳ ಗ್ರಾಮಗಳು ಪಟ್ಟಣಗಳೆಲ್ಲಾ ಇಪ್ಪತ್ತೊಂಭತ್ತು.
  • 33 ತಗ್ಗಿನ ದೇಶ ಎಷ್ಟಾವೋಲ್‌, ಚೊರ್ಗಾ, ಅಶ್ನಾ,
  • 34 ಜನೋಹ, ಏಂಗನ್ನೀಮ್‌,
  • 35 ತಪ್ವೂಹ, ಏನಾಮ್‌ ಯರ್ಮೂತ್‌,
  • 36 ಅದುಲ್ಲಾಮ್‌, ಸೋಕೋ, ಅಜೇಕಾ, ಶಾರಯಿಮ್‌, ಅದೀತಯಿಮ್‌, ಗೆದೇರಾ, ಗೆದೆರೋತಯಿಮ್‌ ಎಂಬ ಅವುಗಳ ಗ್ರಾಮಗಳು ಅದರ ಹದಿನಾಲ್ಕು ಪಟ್ಟಣಗಳು;
  • 37 ಚೆನಾನ್‌, ಹದಾಷಾ, ಮಿಗ್ದಲ್ಗಾದ್‌,
  • 38 ದಿಲಾನ್‌, ಮಿಚ್ವೆ, ಯೊಕ್ತೇಲ್‌,
  • 39 ಲಾಕೀಷ್‌, ಬೊಚ್ಕತ್‌, ಎಗ್ಲೋನ್‌
  • 40 ಕಬ್ಬೋನ್‌, ಲಹ್ಮಾಸ್‌, ಕಿತ್ಲೀಷ್‌, ಗೆದೇರೋತ್‌, ಬೇತ್‌ದಾಗೋನ್‌, ನಾಮಾ,
  • 41 ಮಕ್ಕೇದಾ ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ;
  • 42 ಇದಲ್ಲದೆ ಲಿಬ್ನಾ, ಎತೆರ್‌, ಆಷಾನ್‌,
  • 43 ಇಪ್ತಾಹ,
  • 44 ಅಶ್ನಾ, ನೆಚೀಬ್‌, ಕೆಯಾಲಾ, ಅಕ್ಜೀಬ್‌, ಮಾರೇಷಾಎಂಬ ಅವುಗಳ ಗ್ರಾಮಗಳು ಒಂಭತ್ತು ಪಟ್ಟಣಗಳು;
  • 45 ಎಕ್ರೋನ್‌ ಅದರ ಪಟ್ಟಣಗಳು, ಗ್ರಾಮಗಳು ಸಹ.
  • 46 ಎಕ್ರೋನಿನಿಂದ ಸಮುದ್ರದ ವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳೂ
  • 47 ಅಷ್ಡೋದ್‌ ಅದರ ಪಟ್ಟಣಗಳೂ ಗ್ರಾಮಗಳೂ ಗಾಜಾ, ಅದರ ಪಟ್ಟಣಗಳೂ ಗ್ರಾಮಗಳೂ ಐಗುಪ್ತದ ನದಿ, ದೊಡ್ಡ ಸಮುದ್ರ, ಅದರ ಮೇರೆ, ಇವುಗಳ ವರೆಗೂ
  • 48 ಬೆಟ್ಟಗಳಲ್ಲಿರುವ ಶಾವಿಾರ್‌, ಯತ್ತೀರ್‌, ಸೋಕೋ,
  • 49 ದನ್ನಾ, ದೆಬೀರ್‌ ಎಂಬ ಕಿರ್ಯತ್‌ಸನ್ನಾ,
  • 50 ಅನಾಬ್‌, ಎಷ್ಟೆಮೋ, ಆನೀಮ್‌,
  • 51 ಗೋಷೆನ್‌, ಹೋಲೋನ್‌ಗಿಲೋ ಎಂಬ ಹನ್ನೊಂದು ಪಟ್ಟಣ ಗಳು ಅವುಗಳ ಗ್ರಾಮಗಳು.
  • 52 ಅರಬ್‌, ದೂಮಾ, ಎಷಾನ್‌,
  • 53 ಯಾನೂಮ್‌, ಬೇತ್‌ತಪ್ಪೂಹ, ಅಫೇಕಾ.
  • 54 ಹುಮ್ಟಾ, ಹೆಬ್ರೋನೆಂಬ ಕಿರ್ಯತ್‌ಅರ್ಬ, ಚೀಯೋರ್‌ ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳೂ.
  • 55 ಮಾವೋನ್‌, ಕರ್ಮೆಲ್‌, ಜೀಫ್‌, ಯುಟ್ಟಾ,
  • 56 ಇಜ್ರೇಲ್‌, ಯೊಗ್ದೆಯಾಮ್‌, ಜನೋಹ,
  • 57 ಕಯಿನ್‌, ಗಿಬೆಯಾ, ತಿಮ್ನಾ ಎಂಬ ಹತ್ತು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
  • 58 ಹಲ್ಹೂಲ್‌, ಬೇತ್‌ಚೂರ್‌, ಗೆದೋರ್‌,
  • 59 ಮಾರಾತ್‌, ಬೇತನೋತ್‌, ಎಲ್ಟೆಕೋನ್‌ ಎಂಬ ಆರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
  • 60 ಕಿರ್ಯತ್ಯಾರೀಮ್‌ ಎಂಬ ಕಿರ್ಯತ್‌ಬಾಳ್‌, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
  • 61 ಅರಣ್ಯದಲ್ಲಿರುವ ಬೇತ್‌ಅರಾಬಾ, ಮಿದ್ದೀನ್‌, ಸೆಕಾಕಾ,
  • 62 ನಿಬ್ಷಾನ್‌, ಉಪ್ಪಿನಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು; ಮತ್ತು ಅವು ಗಳ ಗ್ರಾಮಗಳು.
  • 63 ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೂದನ ಮಕ್ಕಳು ಹೊರಡಿಸಿ ಬಿಡುವದಕ್ಕಾಗಲಿಲ್ಲ. ಆದದರಿಂದ ಈ ದಿವಸದ ವರೆಗೂ ಯೆಬೂಸಿಯರು ಯೂದನ ಮಕ್ಕಳ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.