ಯೊಹೋಶುವ 19
  • 1 ಎರಡನೇ ಚೀಟು ಸಿಮೆಯೋನನಿಗೆ ಬಿತ್ತು. ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರವಾಯಿತು. ಅವರ ಬಾಧ್ಯತೆ ಯೂದನ ಮಕ್ಕಳ ಬಾಧ್ಯೆತೆಯ ಮಧ್ಯದಲ್ಲಿತ್ತು.
  • 2 ಅವರ ಬಾಧ್ಯತೆಯಲ್ಲಿ ಸೇರಿದ ಪಟ್ಟಣಗಳು ಯಾವವಂದರೆ: ಬೇರ್ಷೆಬ, ಶೆಬ, ಮೋಲಾದಾ,
  • 3 ಹಚರ್‌ಷೂವಾಲ್‌, ಬಾಲಾ, ಎಚೆಮ್‌,
  • 4 ಎಲ್ತೋಲದ್‌, ಬೆತೂಲ್‌, ಹೋರ್ಮಾ,
  • 5 ಚಿಕ್ಲಗ್‌, ಬೇರ್ತ್‌ಮ್‌ಕಾಬೋತ್‌, ಹಚರ್‌ಸೂಸಾ,
  • 6 ಭೇತ್‌ಲೆ ಬಾವೋತ್‌, ಶಾರೂಹೆನ್‌ ಎಂಬ ಹದಿಮೂರು ಪಟ್ಟಣಗಳು ಅವುಗಳ ಗ್ರಾಮಗಳು
  • 7 ಆಯಿನ್‌, ರಿಮ್ಮೋನ್‌, ಏತೆರ್‌, ಆಷಾನ್‌ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು;
  • 8 ಈ ಪಟ್ಟಣಗಳ ಸುತ್ತಲೂ ಬಾಲತ್‌ಬೇರಿನ ವರೆಗೂ ದಕ್ಷಿಣದಲ್ಲಿರುವ ರಾಮ ವರೆಗೂ ಇರುವ ಎಲ್ಲಾ ಗ್ರಾಮಗಳ ಸಹಿತವಾಗಿ ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬ ಗಳ ಪ್ರಕಾರ ಸಿಕ್ಕ ಬಾಧ್ಯತೆಯಾಗಿತ್ತು.
  • 9 ಸಿಮೆಯೋನನ ಮಕ್ಕಳ ಬಾಧ್ಯತೆ ಯೂದನ ಮಕ್ಕಳ ಭಾಗದಲ್ಲಿ ಇತ್ತು. ಯಾಕಂದರೆ ಯೂದನ ಮಕ್ಕಳ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ ಸಿಮೆಯೋನನ ಮಕ್ಕಳಿಗೆ ಅವರ ಭಾಗದಲ್ಲಿ ಬಾಧ್ಯತೆ ಉಂಟಾಯಿತು.
  • 10 ಮೂರನೇ ಚೀಟು ಬಿದ್ದ ಭಾಗ ಜೆಬುಲೂನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಅವರ ಬಾಧ್ಯತೆಯ ಮೇರೆ ಸಾರೀದಿನ ವರೆಗೂ ಆಯಿತು.
  • 11 ಅಲ್ಲಿಂದ ಸಮುದ್ರದ ಕಡೆಗೆ ಹೋಗಿ ಮರ್ಗಲಾಕ್ಕೆ ಏರಿ ದಬ್ಬೆಷೆತಿಗೆ ಹೋಗಿ ಯೊಕ್ನೆಯಾಮಿಗೆ ಎದುರಾದ ನದಿಗೆ ಮುಗಿಯುವದು.
  • 12 ಅದು ಸಾರೀದಿನಿಂದ ಮೂಡಣ ಸೂರ್ಯನು ಉದಯಿಸುವ ಕಡೆಯಿಂದ ಕಿಸ್ಲೋತ್‌ತ್ತಾಬೋರಿನ ಮೇರೆಗೆ ತಿರುಗಿ ಅಲ್ಲಿಂದ ದಾಬೆರತಿಗೆ ಹೊರಟು ಯಾಫೀಯಕ್ಕೆ ಹೋಗಿ
  • 13 ಅಲ್ಲಿಂದ ಪೂರ್ವ ದಿಕ್ಕಿನಲ್ಲಿರುವ ಗತ್‌ಹೇಫೆರನ್ನು ಎತ್‌ಕಾಚೀನನ್ನು ದಾಟಿ, ರಿಮ್ಮೊಮೆತೋರದ ವರೆಗೂ ನೇಯಕ್ಕೂ ಹಾದು
  • 14 ಅಲ್ಲಿಂದ ಆ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಹೇಲಿನ ಹಳ್ಳದ ತಗ್ಗಿಗೆ ಮುಗಿಯುವದು.
  • 15 ಈ ಮೇರೆಯಲ್ಲಿರುವ ಕಟ್ಟಾತ್‌, ನಹಲ್ಲಾಲ್‌, ಶಿಮ್ರೋನ್‌, ಇದಲಾ, ಬೇತ್ಲೆಹೇಮ್‌ ಮೊದಲಾದ ಹನ್ನೆರಡು ಪಟ್ಟಣ ಗಳು ಅವುಗಳ ಗ್ರಾಮಗಳ ಸಹಿತವಾಗಿ
  • 16 ಜೆಬುಲೂ ನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಆ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು.
  • 17 ನಾಲ್ಕನೇ ಚೀಟು ಇಸ್ಸಾಕಾರನಿಗೆ ಬಿತ್ತು. ಇಸ್ಸಾಕಾರನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ
  • 18 ಅವರ ಮೇರೆಯು ಇಜ್ರೇಲಿಗೆ ಎದುರಾದ ಕೆಸುಲ್ಲೋತ್‌, ಶೂನೇಮ್‌,
  • 19 ಹಫಾರಯಿಮ್‌, ಶೀಯೋನ್‌, ಅನಾಹರತ್‌,
  • 20 ರಬ್ಬೀತ್‌, ಕಿಷ್ಯೋನ್‌, ಎಬೆಜ್‌,
  • 21 ರೆಮೆತ್‌, ಏಂಗನ್ನೀಮ್‌, ಏನ್‌ಹದ್ದಾ, ಬೇತ್‌ಪಚ್ಚೇಚ್‌ ಎಂಬ ತೀರಗಳನ್ನು ಸುತ್ತಿ ಅಲ್ಲಿಂದ
  • 22 ತಾಬೋಗೆರ್‌ ಹೊರಟು ಶಹಚೀಮಾ. ಬೇತ್ಷೆಮೆಷ್ಗೆ ಸೇರಿ ಯೊರ್ದನಿಗೆ ಮುಗಿಯುವದು; ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು;
  • 23 ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರಿಗೆ ಉಂಟಾದ ಬಾಧ್ಯತೆಯು.
  • 24 ಐದನೇ ಚೀಟು ಆಶೇರನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರಬಿತ್ತು.
  • 25 ಅವರ ಮೇರೆ ಯಾವವಂದರೆ ಹೆಲ್ಕತ್‌, ಹಲೀ, ಬೆಟೆನ್‌, ಅಕ್ಷಾಫ್‌
  • 26 ಅಲಮ್ಮೆಲೆಕ್‌, ಅಮಾದ್‌, ಮಿಷಾಲ್‌ ಎಂಬ ಪಟ್ಟಣ ಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲಿಗೂ ಶೀಹೋರ್‌ಲಿಬ್ನತ್‌ಗೂ ಹೋಗಿ
  • 27 ಅಲ್ಲಿಂದ ಸೂರ್ಯೋದಯದ ಕಡೆ ಬೇತ್‌ದಾಗೋನಿಗೆ ಉತ್ತರ ಜೆಬುಲೂನಿಗೂ ಬೇತ್‌ ಏಮೆಕ್‌ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಹೇಲಿನ ತಗ್ಗಿಗೂ ವೆಗೀಯೇಲಿಗೂ ಹಾದು ಎಡಭಾಗದಲ್ಲಿರುವ ಕಾಬೂಲಿಗೂ
  • 28 ಅಲ್ಲಿಂದ ಎಬ್ರೋನಿಗೂ ರೆಹೋಬಿನಿಗೂ ಹಮ್ಮೋನಿಗೂ ಕಾನಕ್ಕೂ ಮಹಾಚಿದೋನಿನ ವರೆಗೆ ಹಾದು
  • 29 ರಾಮಕ್ಕೆ ಹೋಗಿ ತೂರ್‌ ಎಂಬ ಬಲವಾದ ಪಟ್ಟಣದ ವರೆಗೂ ತಿರುಗಿ ಅಲ್ಲಿಂದ ಹೋಸಾಕ್ಕೆ ಹೊರಟು ಸಮುದ್ರದ ಬಳಿಯ ಅಕ್ಜೀಬಿನ ಮೇರೆಯ ಅಂಚಿಗೆ ಮುಗಿಯುವದು.
  • 30 ಅದಕ್ಕೆ ಉಮ್ಮಾ, ಅಫೇಕ್‌ ರೆಹೋಬ್‌ ಎಂಬ ಪಟ್ಟಣಗಳು ಸೇರಿದ್ದವು. ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ.
  • 31 ಇದೇ ಆಶೇರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಈ ಪಟ್ಟಣಗಳೂ ಅವುಗಳ ಗ್ರಾಮಗಳೂ ಬಾಧ್ಯತೆಯಾಗಿದ್ದವು.
  • 32 ಆರನೇ ಚೀಟು ನಫ್ತಾಲಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು.
  • 33 ಅವರ ಮೇರೆಯು ಹೆಲೇಫಿನಿಂದ ಅಲ್ಲೋನಿನಿಂದ ಚಾನನ್ನಿಮ್‌, ಅದಾಮಿ, ನೆಕೆಬ್‌, ಯಬ್ನೆಯೇಲ್‌, ಇವುಗಳ ಮೇಲೆ ಹಾದು ಲಕ್ಕೂಮಿನವರೆಗೂ ಹೋಗಿ ಯೊರ್ದನಿಗೆ ಮುಗಿಯು ವದು.
  • 34 ಆ ಮೇರೆಯು ಪಶ್ಚಿಮಕ್ಕೆ ಅಜ್ನೊತ್‌ ತಾಬಾರಿಗೆ ತಿರುಗಿ ಅಲ್ಲಿಂದ ಹುಕ್ಕೋಕಿಗೆ ಹೊರಟು ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನನ್ನೂ ಸೂರ್ಯೋದಯದ ದಿಕ್ಕಿನಲ್ಲಿ ಯೊರ್ದನಿನ ಬಳಿಯ ಲ್ಲಿರುವ ಯೂದವನ್ನೂ ಮುಟ್ಟಿ ಬರುವದು.
  • 35 ಇದರಲ್ಲಿ ರುವ ಕೋಟೆಗಳುಳ್ಳ ಪಟ್ಟಣಗಳು ಯಾವವಂದರೆ, ಚಿದ್ದೀಮ್‌, ಚೇರ್‌, ಹಮ್ಮತ್‌, ರಕ್ಕತ್‌, ಕಿನ್ನೆರೆತ್‌
  • 36 ಆದಾಮಾ, ರಾಮಾ, ಹಾಚೋರ್‌,
  • 37 ಕೆದೆಷ್‌, ಎದ್ರೈ, ಎನ್‌ಹಾಚೊರ್‌,
  • 38 ಇರೋನ್‌, ಮಿಗ್ದಲೇಲ್‌, ಹೊರೇಮ್‌, ಬೇತ್‌ಷೆಮೆಷೆ ಬೆತನಾತ್‌ ಮೊದಲಾದ ಹತ್ತೊಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳೂ
  • 39 ಇದೇ ನಫ್ತಾಲಿಯ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ದೊರೆತ ಬಾಧ್ಯತೆಯಾಗಿದೆ.
  • 40 ಇದಲ್ಲದೆ ಏಳನೇ ಚೀಟು ದಾನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು.
  • 41 ಅವರ ಬಾದ್ಯತೆಯ ಮೇರೆಯು ಚೋರಾ, ಎಷ್ಟಾವೋಲ್‌, ಈರ್ಷೆಮೆಷ್‌
  • 42 ಶಾಲಬ್ಬೀನ್‌, ಅಯ್ಯಾಲೋನ್‌, ಇತ್ಲಾ,
  • 43 ಏಲೋನ್‌, ತಿಮ್ನಾ, ಎಕ್ರೋನ್‌,
  • 44 ಎಲ್ತೆಕೇ, ಗಿಬ್ಬೆತೋನ್‌, ಬಾಲತ್‌,
  • 45 ಯೆಹುದ್‌, ಬೆನೇಬೆರಕ್‌, ಗತ್‌ಮ್ಮೋನ್‌,
  • 46 ಮೇಯರ್ಕೋನ್‌, ರಕ್ಕೋನ್‌ ಎಂಬ ಪಟ್ಟಣಗಳು. ಯೊಪ್ಪಕ್ಕೆ ಎದುರಾದ ಮೇರೆಯು ಸಹ.
  • 47 ಇದಲ್ಲದೆ ದಾನನ ಮಕ್ಕಳ ಮೇರೆಯು ಅವರಿಗೆ ಸಾಲದಿದ್ದರಿಂದ ಅವರು ಹೊರಟು ಹೋಗಿ ಲೆಷೆಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್‌ ಎಂದು ಹೆಸರಿಟ್ಟರು.
  • 48 ಈ ಪಟ್ಟಣಗಳೂ ಅವುಗಳ ಗ್ರಾಮಗಳೂ ದಾನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ.
  • 49 ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡು ತೀರಿಸಿದಾಗ ಇಸ್ರಾ ಯೇಲ್‌ ಮಕ್ಕಳು ನೂನನ ಮಗನಾದ ಯೆಹೋಶುವ ನಿಗೆ ತಮ್ಮ ಮಧ್ಯದಲ್ಲಿ ಬಾಧ್ಯತೆಯನ್ನು ಕೊಟ್ಟರು.
  • 50 ಅವನು ಕೇಳಿದ ಎಫ್ರಾಯಾಮ್‌ ಬೆಟ್ಟದಲ್ಲಿರುವ ತಿಮ್ನತ್‌ಸೆರಹ ಎಂಬ ಪಟ್ಟಣವನ್ನು ಕರ್ತನ ಮಾತಿನ ಪ್ರಕಾರ ಕೊಟ್ಟರು. ಅವನು ಆ ಪಟ್ಟಣವನ್ನು ಕಟ್ಟಿಸಿ ಅದರಲ್ಲಿ ವಾಸವಾಗಿದ್ದನು.
  • 51 ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.