ಕೀರ್ತನೆಗಳು 35
  • 1 ಓ ಕರ್ತನೇ, ನನ್ನ ಸಂಗಡ ವ್ಯಾಜ್ಯವಾಡುವವರೊಡನೆ ಸಂಗಡ ವ್ಯಾಜ್ಯವಾಡು; ನನಗೆ ವಿರೋಧವಾಗಿ ಯುದ್ಧಮಾಡುವವರ ಸಂಗಡ ಯುದ್ಧ ಮಾಡು.
  • 2 ಗುರಾಣಿಯನ್ನೂ ಖೇಡ್ಯವನ್ನೂ ಹಿಡು ಕೊಂಡು ನನ್ನ ಸಹಾಯಕ್ಕೆ ನಿಂತುಕೋ.
  • 3 ಭಲ್ಲೆ ಯನ್ನು ಹಿಡಿದು ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿ--ನಾನೇ ನಿನ್ನ ರಕ್ಷಣೆ ಎಂದು ನನ್ನ ಪ್ರಾಣಕ್ಕೆ ಹೇಳು.
  • 4 ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
  • 5 ಅವರು ಗಾಳಿಯ ಮುಂದಿನ ಹೊಟ್ಟಿನ ಹಾಗೆ ಆಗಲಿ; ಕರ್ತನ ದೂತನು ಅವರನ್ನು ಹಿಂದಟ್ಟಲಿ, ಸೆಲಾ.
  • 6 ಅವರ ಮಾರ್ಗವು ಕತ್ತಲೆಯೂ ಜಾರಿಕೆಯೂ ಆಗಲಿ; ಕರ್ತನ ದೂತನು ಅವರನ್ನು ಹಿಂಸಿಸಲಿ.
  • 7 ಕಾರಣವಿಲ್ಲದೆ ಅವರು ನನಗೋಸ್ಕರ ತಮ್ಮ ಬಲೆಯನ್ನು ಕುಣಿಯಲ್ಲಿ ಅಡಗಿಸಿಟ್ಟಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣಕೋಸ್ಕರ ಅದನ್ನು ಅಗೆದಿದ್ದಾರೆ.
  • 8 ನಾಶನವು ಅವನಿಗೆ ತಿಳಿಯದೆ ಬರಲಿ; ಅವನು ಅಡಗಿಸಿಟ್ಟ ಬಲೆಯು ಅವನನ್ನೇ ಹಿಡಿಯಲಿ; ಅಂಥಾ ನಾಶನಕ್ಕಾಗಿ ಅವನು ಅದರಲ್ಲಿಯೇ ಬೀಳಲಿ,
  • 9 ಆದರೆ ನನ್ನ ಪ್ರಾಣವು ಕರ್ತನಲ್ಲಿ ಉಲ್ಲಾಸಿಸಿ ಆತನ ರಕ್ಷಣೆ ಯಲ್ಲಿ ಸಂತೋಷಿಸುವದು.
  • 10 ಕರ್ತನೇ, ಬಡವನನ್ನು ಅವನಿಗಿಂತ ಬಲಿಷ್ಠರಿಂದ ಹೌದು, ದರಿದ್ರರನ್ನೂ ಕೊರತೆಯುಳ್ಳವರನ್ನೂ ಸುಲುಕೊಳ್ಳುವವನಿಂದ ಬಿಡಿ ಸುವವನಾದ ನಿನ್ನ ಹಾಗೆ ಯಾರು ಎಂದು ನನ್ನ ಎಲು ಬುಗಳೆಲ್ಲಾ ಹೇಳುವವು.
  • 11 ಸುಳ್ಳು ಸಾಕ್ಷಿಗಳು ಎದ್ದು ನಾನು ತಿಳಿಯದವುಗಳನ್ನು ನನ್ನ ಮೇಲೆ ಹೊರಿಸಿ ದರು.
  • 12 ನನ್ನ ಪ್ರಾಣವನ್ನು ಕೆಡಿಸುವದಕ್ಕೆ ಮೇಲಿಗೆ ಬದಲಾಗಿ ಕೇಡನ್ನು ನನಗೆ ಮಾಡಿದರು.
  • 13 ನಾನಾ ದರೋ ಅವರು ಅಸ್ವಸ್ಥವಾದಾಗ, ಗೋಣೀ ತಟ್ಟು ಹೊದ್ದುಕೊಂಡು ನನ್ನ ಪ್ರಾಣವನ್ನು ಉಪವಾಸದಿಂದ ಕುಂದಿಸಿದೆನು; ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು.
  • 14 ಅವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಆದ ಹಾಗೆ ನಡೆದುಕೊಂಡೆನು; ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವ ನಾಗಿ ಬೊಗ್ಗಿಕೊಂಡೆನು.
  • 15 ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
  • 16 ಔತಣಗಳಲ್ಲಿ ಗೇಲಿಮಾಡುವ ಕಪಟಿಗಳ ಸಂಗಡ ನನ್ನ ಮೇಲೆ ತಮ್ಮ ಹಲ್ಲುಗಳನ್ನು ಕಡಿಯುತ್ತಾರೆ.
  • 17 ಕರ್ತನೇ, ಎಷ್ಟರ ವರೆಗೆ ನೀನು ನೋಡುವಿ? ಅವರ ನಾಶನಗಳಿಂದಲೂ ಸಿಂಹಗಳಿಂದಲೂ ನನ್ನ ಪ್ರಿಯವಾದ ಪ್ರಾಣವನ್ನು ತಪ್ಪಿಸು.
  • 18 ಮಹಾಸಭೆ ಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರಲ್ಲಿ ನಿನ್ನನ್ನು ಸ್ತುತಿಸುವೆನು.
  • 19 ನನ್ನ ಶತ್ರುಗಳು ನನ್ನ ವಿಷ ಯದಲ್ಲಿ ಸುಳ್ಳಾಗಿ ಸಂತೋಷಪಡದೆ ಇರಲಿ; ಇಲ್ಲವೆ ನನ್ನನ್ನು ಕಾರಣವಿಲ್ಲದೆ ಹಗೆಮಾಡುವವರು ಕಣ್ಣು ಸನ್ನೆಮಾಡದೆ ಇರಲಿ.
  • 20 ಅವರು ಅಸಮಾಧಾನವಾಗಿ ಮಾತನಾಡಿ ದೇಶದಲ್ಲಿರುವ ಶಾಂತರ ಮೇಲೆ ಮೋಸದ ವಿಷಯಗಳನ್ನು ಕಲ್ಪಿಸುತ್ತಾರೆ.
  • 21 ಹೌದು, ನನಗೆ ವಿರೋಧವಾಗಿ ತಮ್ಮ ಬಾಯನ್ನು ಅಗಲ ಮಾಡಿ--ಆಹಾ, ಆಹಾ ನಮ್ಮ ಕಣ್ಣು ಅದನ್ನು ನೋಡಿತು ಅನ್ನುತ್ತಾರೆ.
  • 22 ಓ ಕರ್ತನೇ, ನೀನು ಇದನ್ನು ನೋಡಿದ್ದೀ; ಸುಮ್ಮನಿರಬೇಡ, ಓ ಕರ್ತನೇ, ನನಗೆ ದೂರವಾಗಿರ ಬೇಡ.
  • 23 ನನ್ನ ದೇವರೇ, ಕರ್ತನೇ, ನನ್ನ ನ್ಯಾಯಕ್ಕೂ ನನ್ನ ವ್ಯಾಜ್ಯಕ್ಕೂ ಎಚ್ಚರವಾಗಿ ಉದ್ರೇಕಗೊಳ್ಳು.
  • 24 ಓ ಕರ್ತನೇ, ನನ್ನ ದೇವರೇ, ನಿನ್ನ ನೀತಿಯ ಪ್ರಕಾರ ನನಗೆ ನ್ಯಾಯತೀರಿಸು; ಅವರು ನನ್ನ ವಿಷಯವಾಗಿ ಸಂತೋಷಪಡದೆ ಇರಲಿ.
  • 25 ಅವರು ತಮ್ಮ ಹೃದಯ ದಲ್ಲಿ--ಹಾ, ನಮ್ಮ ಇಷ್ಟವೇ ನೆರವೇರಿತು ಎಂದು ಹೇಳದಿರಲಿ. ಅವನನ್ನು ನುಂಗಿ ಬಿಟ್ಟೆವೆಂದೂ ಅವರು ಹೇಳದೆ ಇರಲಿ;
  • 26 ನನ್ನ ಕೇಡಿನಲ್ಲಿ ಸಂತೋಷ ಪಡುವವರು ಕೂಡ ನಾಚಿಕೊಂಡು ಒಟ್ಟಿಗೆ ಗಲಿಬಿಲಿ ಯಾಗಿಲಿ, ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊದ್ದುಕೊಳ್ಳಲಿ.
  • 27 ನನ್ನ ನೀತಿಯಲ್ಲಿ ಸಂತೋಷ ಪಡುವವರು ಉತ್ಸಾಹಧ್ವನಿಮಾಡಿ ಆನಂದಪಡಲಿ; ಹೌದು, ತನ್ನ ಸೇವಕನ ಅಭಿವೃದ್ಧಿಯಲ್ಲಿ ಸಂತೋ ಷಪಡುವ ಕರ್ತನು ಮಹಿಮೆಹೊಂದಲಿ ಎಂದು ಅವರು ಯಾವಾಗಲೂ ಹೇಳಲಿ.
  • 28 ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.