ಕೀರ್ತನೆಗಳು 102
  • 1 ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಮೊರೆಯು ನಿನ್ನ ಬಳಿಗೆ ಸೇರಲಿ.
  • 2 ನನಗೆ ಇಕ್ಕಟ್ಟು ಇರುವ ದಿವಸದಲ್ಲಿ ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸು; ನಾನು ಕರೆಯುವ ದಿವಸದಲ್ಲಿ ಬೇಗ ನನಗೆ ಉತ್ತರ ಕೊಡು.
  • 3 ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ.
  • 4 ನನ್ನ ಹೃದಯವು ಹೊಡೆಯಲ್ಪಟ್ಟ ಹುಲ್ಲಿನ ಹಾಗೆ ಒಣಗಿಹೋಗಿದೆ; ಆದದರಿಂದ ನಾನು ನನ್ನ ರೊಟ್ಟಿಯನ್ನು ತಿನ್ನುವದಕ್ಕೆ ಮರೆತುಬಿಡುತ್ತೇನೆ.
  • 5 ನನ್ನ ಮೂಲುಗುವಿಕೆಯ ಸ್ವರದಿಂದ ಎಲುಬುಗಳು ನನ್ನ ಮಾಂಸಕ್ಕೆ ಅಂಟುತ್ತವೆ.
  • 6 ನಾನು ಅರಣ್ಯದ ಬಕಕ್ಕೆ ಸಮಾನನಾಗಿದ್ದೇನೆ; ನಾನು ಅರಣ್ಯದ ಗೂಬೆಯ ಹಾಗಿದ್ದೇನೆ.
  • 7 ನಾನು ಎಚ್ಚರವಾಗಿದ್ದೂ; ಮಾಳಿಗೆಯ ಮೇಲಿರುವ ಒಂಟಿಯಾದ ಪಕ್ಷಿಯ ಹಾಗಿದ್ದೇನೆ.
  • 8 ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಿಸಿಕೊಳ್ಳುವವರು ನನಗೆ ವಿರೋಧ ವಾಗಿ ಆಣೆ ಇಡುತ್ತಾರೆ.
  • 9 ನಿನ್ನ ರೋಷದ ಮತ್ತು ನಿನ್ನ ರೌದ್ರದ ನಿಮಿತ್ತವೇ ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿ ದ್ದೇನೆ.
  • 10 ನನ್ನನ್ನು ನೀನು ಎತ್ತಿ ಕೆಡವಿ ಹಾಕಿದ್ದೀ;
  • 11 ನನ್ನ ದಿವಸಗಳು ನೀಳದ ನೆರಳಿನ ಹಾಗಿವೆ; ನಾನು ಹುಲ್ಲಿನ ಹಾಗೆ ಒಣಗುತ್ತೇನೆ.
  • 12 ಆದರೆ ಓ ಕರ್ತನೇ, ನೀನು ಎಂದೆಂದಿಗೂ ಇರುವವನಾಗಿದ್ದೀ, ನಿನ್ನ ಸ್ಮರಣೆಯು ತಲತಲಾಂತ ರಕ್ಕೂ ಅದೆ.
  • 13 ನೀನು ಎದ್ದು, ಚೀಯೋನನ್ನು ಕನಿ ಕರಿಸುವಿ; ಯಾಕಂದರೆ ಅದನ್ನು ಕರುಣಿಸುವದಕ್ಕೆ ಕಾಲವಾಯಿತು; ಹೌದು ನಿರ್ಣಯಿಸಿದ ಸಮಯವು ಬಂದಿದೆ.
  • 14 ನಿನ್ನ ಸೇವಕರು ಅದರ ಕಲ್ಲುಗಳಲ್ಲಿ ಇಷ್ಟಪಡುತ್ತಾರೆ. ಅದರ ಧೂಳನ್ನು ಕರುಣಿಸುತ್ತಾರೆ.
  • 15 ಜನಾಂಗವು ಕರ್ತನ ಹೆಸರಿಗೂ ಭೂರಾಜರೆಲ್ಲರು ನಿನ್ನ ಮಹಿಮೆಗೂ ಭಯಪಡುವರು.
  • 16 ಕರ್ತನು ಚೀಯೋನನ್ನು ಕಟ್ಟುವನು; ಆತನು ತನ್ನ ಮಹಿಮೆಯಲ್ಲಿ ಕಾಣಿಸಿಕೊಳ್ಳುವನು.
  • 17 ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ.
  • 18 ಇದು ಮುಂದಿನ ಸಂತತಿಗೋಸ್ಕರ ಬರೆಯಲ್ಪಡುವದು; ಹುಟ್ಟಲಿಕ್ಕಿರುವ ಜನರು ಕರ್ತನನ್ನು ಸ್ತುತಿಸುವರು.
  • 19 ಜನಾಂಗಗಳೂ ರಾಜ್ಯಗಳೂ ಕರ್ತ ನನ್ನು ಸೇವಿಸುವದಕ್ಕೆ ಒಟ್ಟಾಗಿ ಕೂಡಿ ಬರುವಾಗ
  • 20 ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ.
  • 21 ಕರ್ತನು ಸೆರೆಯವರ ನರಳುವಿಕೆಯನ್ನು ಕೇಳುವ ದಕ್ಕೂ ಮರಣಕ್ಕೆ ನೇಮಕವಾದವರನ್ನು ಬಿಡಿಸು ವದಕ್ಕೂ
  • 22 ತನ್ನ ಪರಿಶುದ್ಧವಾದ ಉನ್ನತ ಸ್ಥಳದಿಂದ ಕಣ್ಣಿಟ್ಟು ಆಕಾಶದಿಂದ ಭೂಮಿಯನ್ನು ನೋಡಿದ್ದಾನೆ.
  • 23 ಆತನು ನನ್ನ ಶಕ್ತಿಯನ್ನು ಮಾರ್ಗದಲ್ಲಿ ಕುಂದಿಸಿ ನನ್ನ ದಿವಸಗಳನ್ನು ಕಡಿಮೆ ಮಾಡಿದನು.
  • 24 ಓ ನನ್ನ ದೇವರೇ, ನನ್ನ ದಿವಸಗಳ ಮಧ್ಯದಲ್ಲಿ ನನ್ನನ್ನು ಒಯ್ಯಬೇಡ; ನಿನ್ನ ವರುಷಗಳು ತಲತಲಾಂತರಗಳಿಗೂ ಅವೆ ಅಂದೆನು.
  • 25 ನೀನು ಪೂರ್ವಕಾಲದಲ್ಲಿ ಭೂಮಿ ಯನ್ನು ಸ್ಥಾಪಿಸಿದಿ; ಆಕಾಶಗಳು ನಿನ್ನ ಕೈ ಕೆಲಸಗಳಾ ಗಿವೆ.
  • 26 ಅವು ನಾಶವಾಗುವವು; ಆದರೆ ನೀನು ಸ್ಥಿರ ವಾಗಿರುತ್ತೀ; ಹೌದು, ಅವುಗಳೆಲ್ಲಾ ವಸ್ತ್ರದ ಹಾಗೆ ಜೀರ್ಣವಾಗುವವು; ಉಡುಪಿನ ಹಾಗೆ ಅವುಗ ಳನ್ನು ಬದಲಾಯಿಸುವಿ; ಆಗ ಅವು ಬದಲಾಗುವವು.
  • 27 ಆದರೆ ನೀನು ಏಕ ರೀತಿಯಾಗಿರುತ್ತೀ; ನಿನ್ನ ವರುಷಗಳು ಮುಗಿಯವು.
  • 28 ನಿನ್ನ ಸೇವಕರ ಮಕ್ಕಳು ನೆಲೆಯಾಗಿದ್ದು ಅವರ ಸಂತತಿಯು ನಿನ್ನ ಮುಂದೆ ಸ್ಥಾಪಿಸಲ್ಪಡುವದು.