ಕೀರ್ತನೆಗಳು 72
  • 1 ಓ ದೇವರೇ, ನಿನ್ನ ನ್ಯಾಯತೀರ್ಪುಗಳನ್ನು ಅರಸನಿಗೂ ನೀತಿಯನ್ನು ಅರಸನ ಮಗನಿಗೂ ಕೊಡು.
  • 2 ನಿನ್ನ ಜನರಿಗೆ ನೀತಿಯಿಂದಲೂ ದೀನರಿಗೆ ನ್ಯಾಯದಿಂದಲೂ ಆತನು ತೀರ್ಪು ಮಾಡು ವನು.
  • 3 ಬೆಟ್ಟಗಳೂ ಚಿಕ್ಕ ಗುಡ್ಡಗಳೂ ನೀತಿಯಿಂದ ಸಮಾಧಾನವನ್ನು ಜನರಿಗೆ ತರುವವು.
  • 4 ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು.
  • 5 ಸೂರ್ಯನೂ ಚಂದ್ರನೂ ಇರುವ ವರೆಗೆ ತಲ ತಲಾಂತರಗಳು ನಿನಗೆ ಭಯಪಡುವರು.
  • 6 ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ ಭೂಮಿಯನ್ನು ನೆನಸುವ ಸುರಿಯುವ ಮಳೆಗಳ ಹಾಗೆಯೂ ಆತನು ಇಳಿದು ಬರುವನು.
  • 7 ಆತನ ದಿವಸಗಳಲ್ಲಿ ನೀತಿವಂತನು ವೃದ್ಧಿಯಾಗುವನು. ಸಮೃದ್ಧಿ ಯಾದ ಸಮಾಧಾನವು ಚಂದ್ರನು ಇರುವ ವರೆಗೂ ಇರುವದು.
  • 8 ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಆತನು ಆಳುವನು.
  • 9 ಆತನ ಮುಂದೆ ಅರಣ್ಯ ನಿವಾಸಿಗಳು ಎರಗುವರು; ಆತನ ಶತ್ರುಗಳು ಧೂಳನ್ನು ನೆಕ್ಕುವರು.
  • 10 ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು.
  • 11 ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು.
  • 12 ಆತನಿಗೆ ಮೊರೆ ಇಡುವ ಬಡವರನ್ನೂ ಸಹಾಯ ಕನಿಲ್ಲದ ದೀನನನ್ನೂ ಬಿಡಿಸುವನು.
  • 13 ದರಿದ್ರನನ್ನೂ ಬಡವನನ್ನೂ ಕರುಣಿಸುವನು; ಬಡವರ ಪ್ರಾಣಗ ಳನ್ನು ರಕ್ಷಿಸುವನು.
  • 14 ಮೋಸದಿಂದಲೂ ಬಲಾತ್ಕಾರ ದಿಂದಲೂ ಅವರ ಪ್ರಾಣವನ್ನು ಬಿಡುಗಡೆ ಮಾಡು ವನು; ಅವರ ರಕ್ತವು ಆತನ ದೃಷ್ಟಿಯಲ್ಲಿ ಅಮೂಲ್ಯ ವಾಗಿರುವದು.
  • 15 ಅವನು ಬಾಳುವನು; ಅವನಿಗೆ ಶೆಬಾದ ಚಿನ್ನ ವನ್ನು ಕೊಡುವರು; ಅವನಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡುವರು; ಪ್ರತಿದಿನ ಅವನನ್ನು ಕೊಂಡಾಡುವರು.
  • 16 ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯ ಮೇಲೆ ಇರುವದು; ಅದರ ಫಲವು ಲೆಬನೋನಿನ ಹಾಗೆ ಕದಲುವದು. ಪಟ್ಟಣದ ವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿಯಾಗುವರು.
  • 17 ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು.
  • 18 ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ.
  • 19 ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್‌. ಆಮೆನ್‌.
  • 20 ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.