ಕೀರ್ತನೆಗಳು 91
  • 1 ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.
  • 2 ನನ್ನ ಆಶ್ರಯವೂ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ ಎಂದು ನಾನು ಕರ್ತನಿಗೆ ಹೇಳುತ್ತೇನೆ.
  • 3 ನಿಶ್ಚಯವಾಗಿ ಆತನು ನಿನ್ನನ್ನು ಬೇಡನ ಉರ್ಲಿ ನಿಂದಲೂ ಅಪಾಯದ ಜಾಡ್ಯದಿಂದಲೂ ಬಿಡಿಸು ವನು.
  • 4 ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಗಿಸುವನು; ಆತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿ; ಆತನ ಸತ್ಯವು ನಿನ್ನ ಖೇಡ್ಯವೂ ಡಾಲೂ ಆಗಿದೆ.
  • 5 ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
  • 6 ಅಂಧಕಾರದಲ್ಲಿ ನಡೆಯುವ ಜಾಡ್ಯಕ್ಕೂ ಇಲ್ಲವೆ ಮಧ್ಯಾಹ್ನದಲ್ಲಿ ಹಾಳು ಮಾಡುವ ನಾಶನಕ್ಕೂ ನೀನು ಭಯಪಡದೆ ಇರುವಿ.
  • 7 ನಿನ್ನ ಕಡೆಯಲ್ಲಿ ಸಾವಿರ ಜನರೂ ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರೂ ಬಿದ್ದಾಗ್ಯೂ ನಿನ್ನ ಸವಿಾಪಕ್ಕೆ ಅದು ಬರುವದಿಲ್ಲ.
  • 8 ನಿನ್ನ ಕಣ್ಣುಗಳಿಂದ ಮಾತ್ರ ನೀನು ದೃಷ್ಟಿಸಿ ದುಷ್ಟರಿಗೆ ಮುಯ್ಯಿಗೆ ಮುಯ್ಯಿ ಆಗುವದನ್ನು ನೋಡುವಿ.
  • 9 ಮಹೋನ್ನತನಾದ ಕರ್ತನನ್ನು ನಿನ್ನ ಆಶ್ರಯ ವಾಗಿಯೂ ನಿವಾಸಸ್ಥಾನವಾಗಿಯೂ ಮಾಡಿಕೊಂಡ ದ್ದರಿಂದ
  • 10 ಕೇಡು ನಿನ್ನನ್ನು ಮುಟ್ಟದು; ಯಾವ ವ್ಯಾಧಿಯೂ ನಿನ್ನ ನಿವಾಸಕ್ಕೆ ಸವಿಾಪಿಸದು.
  • 11 ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.
  • 12 ನಿನ್ನ ಪಾದವು ಕಲ್ಲಿಗೆ ತಗಲದ ಹಾಗೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
  • 13 ಸಿಂಹ ಸರ್ಪ ಮೇಲೆ ನಡೆಯುವಿ; ಯೌವನದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ.
  • 14 ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು.
  • 15 ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.
  • 16 ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.